Thursday, January 21, 2021
Home ಅಂತರ್ ರಾಜ್ಯ ಮುಂಬೈ ದಾಳಿ ಮಾಸ್ಟರ್ ಮೈಂಡ್ ಜಾಕೀರ್ ಲಖ್ವಿ ಗೆ 15 ವರ್ಷದ ಜೈಲು ಶಿಕ್ಷೆ

ಇದೀಗ ಬಂದ ಸುದ್ದಿ

ಮುಂಬೈ ದಾಳಿ ಮಾಸ್ಟರ್ ಮೈಂಡ್ ಜಾಕೀರ್ ಲಖ್ವಿ ಗೆ 15 ವರ್ಷದ ಜೈಲು ಶಿಕ್ಷೆ

 ಲಾಹೋರ್: ಉಗ್ರ, 26-11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಜಾಕೀರ್ ಲಖ್ವಿಗೆ ಲಾಹೋರ್ ನ್ಯಾಯಾಲಯ 15 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಭಯೋತ್ಪಾದನಾ ಕಾರ್ಯಗಳಿಗೆ ಹಣಕಾಸಿನ ನೆರವು ನೀಡಿದ ಆಪಾದನೆಯ ಮೇಲೆ ಲಖ್ವಿಗೆ ಶಿಕ್ಷೆ ನೀಡಲಾಗಿದೆ.

ಲಷ್ಕರ್ ಎ ತೈಬಾದ ಆಪರೇಶನ್ಸ್ ಕಮಾಂಡರ್ ಆಗಿರುವ ಜಾಕೀರ್ ಲಖ್ವಿಯನ್ನು ಜ.2ರಂದು ಬಂಧಿಸಲಾಗಿತ್ತು. ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ವಿರುದ್ಧವೂ ಇದೇ ಆರೋಪದಡಿ ಅರೆಸ್ಟ್ ವಾರಂಟ್ ಹೊರಡಿಸಲಾಗಿದೆ.

ಮುಂಬೈ ಅಟ್ಯಾಕ್ ಪ್ರಕರಣದಲ್ಲಿ ಈ ಹಿಂದೆ ಬಂಧಿತನಾಗಿದ್ದ ಲಖ್ವಿ 2015ರಲ್ಲಿ ಜಾಮೀನು ಪಡೆದಿದ್ದ. ದೇಶದಲ್ಲಿ ಸ್ವಚ್ಛಂದವಾಗಿ ತಿರುಗಾಡುತ್ತಿರುವ ಉಗ್ರರನ್ನು ಬಂಧಿಸಬೇಕೆಂದು ಅಂತಾರಾಷ್ಟ್ರೀಯ ಒತ್ತಡಗಳು ಹೆಚ್ಚಾದ ಹಿನ್ನಲೆಯಲ್ಲಿ ಜ.2ರಂದು ಪಂಜಾಬ್ ಪ್ಯಾಂತ್ಯದಲ್ಲಿ ಬಂಧಿಸಲಾಗಿತ್ತು.

TRENDING