ವಾಷಿಂಗ್ಟನ್ : ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರೋಧದ ನಡುವೆಯೂ ಅಮೆರಿಕದ ಸಂಸತ್ತು ಡೆಮಾಕ್ರೆಟಿಕ್ ಪಕ್ಷದ ಜೋ ಬೈಡನ್ (78) ಅವರನ್ನು 46 ನೇ ಅಮೆರಿಕದ ಅಧ್ಯಕ್ಷರನ್ನಾಗಿ ಹಾಗೂ ಭಾರತೀಯ ಮೂಲದ ಕಮಲಾ ಹ್ಯಾರಿಸ್ (56) ಅವರನ್ನು 49 ನೇ ಉಪಾಧ್ಯಕ್ಷೆಯನ್ನಾಗಿಯೂ ಅಧಿಕೃತವಾಗಿ ಘೋಷಿಸಿದೆ. ಇದರಿಂದಾಗಿ ಅಮೆರಿಕ ಸಂಸತ್ ಸಭೆಯ ಅಧಿಕೃತ ಘೋಷಣೆ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಅಮೇರಿಕಾದಲ್ಲಿ ಟ್ರಂಪ್ ಬೆಂಬಲಿಗರ ಪ್ರತಿಭಟನೆ ತಾರಕಕ್ಕೆ ಏರಿದೆ. ಬೆಂಬಲಿಗರ ಪ್ರತಿಭಟನೆಯಿಂದಾಗಿ ಟ್ರಂಪ್ ಟ್ವಿಟ್ಟರ್, ಫೇಸ್ ಬುಕ್, ಇನ್ಸ್ ಸ್ಟಾಗ್ರಾಂ ಖಾತೆಗೆ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಈ ಸಂದರ್ಭದಲ್ಲಿಯೇ ಕಳೆದ ಇತ್ತೀಚಿಗೆ ಭರ್ಜರಿ ಗೆಲುವು ಸಾಧಿಸಿದ್ದಂತ ಜೋ ಬೈಡನ್ ಅವರನ್ನು ಇದೀಗ ಅಧ್ಯಕ್ಷರನ್ನಾಗಿ, ಉಪಾಧ್ಯಕ್ಷರನ್ನಾಗಿ ಕಮಲಾ ಹ್ಯಾರಿಸ್ ಅವರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.
ಜನವರಿ 20 ರಂದು ಅಧಿಕಾರ ಹಸ್ತಾಂತರವಾಗಲಿದೆ. ಬುಧವಾರ ರಾತ್ರಿ ಸಂಸತ್ತಿನ ಒಳಗೆ ನುಗ್ಗಿ ಟ್ರಂಪ್ ಬೆಂಬಲಿಗರು ಸಾಕಷ್ಟು ರಂಪಾಟ ನಡೆಸಿದರೂ ಅದು ಮುಗಿದ ನಂತರ ಮತ್ತೆ ಉಭಯ ಸದನಗಳು ಜಂಟಿ ಕಲಾಪ ನಡೆಸಿ ಗುರುವಾರ ಬೆಳಗಿನ ಜಾವ ಬೈಡೆನ್ ಅವರ ಅಧ್ಯಕ್ಷೀಯ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದವು