Saturday, January 16, 2021
Home ಕ್ರೈಂ ನ್ಯೂಸ್ ತಾಯಿ ಮತ್ತು ಸಹೋದರಿಯ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಂದ ಪಾಪಿ!

ಇದೀಗ ಬಂದ ಸುದ್ದಿ

ತಾಯಿ ಮತ್ತು ಸಹೋದರಿಯ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಂದ ಪಾಪಿ!

ದಾವಣಗೆರೆ: ಜನ್ಮಕೊಟ್ಟ ತಾಯಿ ಮತ್ತು ಒಡಹುಟ್ಟಿದ ತಂಗಿ ಮೇಲೆ ಟ್ರ್ಯಾಕ್ಟರ್​ ಹರಿಸಿ ಇಬ್ಬರನ್ನೂ ಕೊಂದು ದುಷ್ಕರ್ಮಿ ಪರಾರಿಯಾಗಿರುವ ಘಟನೆ ಹರಿಹರ ತಾಲೂಕಿನ ಎಕ್ಕೆಗೊಂದಿ ಗ್ರಾಮದಲ್ಲಿ ಸಂಭವಿಸಿದೆ.

ಸರೋಜಮ್ಮ (60) ಮತ್ತು ಇವರ ಪುತ್ರಿ ಜ್ಯೋತಿ (34) ಮೃತ ದುರ್ದೈವಿಗಳು. ಸರೋಜಮ್ಮರ ಪುತ್ರ, ಹರಿಹರ ತಾಲೂಕಿನ ಪಾಳ್ಯ ಗ್ರಾಮದ ಭರಮಗೌಡ ಆರೋಪಿ. 

ಹೊರಗೆ ಬಂದಿದ್ದ ಅಮ್ಮ-ಮಗಳು ಇಬ್ಬರೂ ಶುಕ್ರವಾರ ಮಧ್ಯಾಹ್ನ ಮನೆಯತ್ತ ನಡೆದುಕೊಂಡು ಹೋಗುತ್ತಿದ್ದರು. ಮಾರ್ಗಮಧ್ಯೆ ಟ್ರ್ಯಾಕ್ಟರ್​ ಸವಾರಿ ಮಾಡಿಕೊಂಡು ಬಂದ ಭರಮಗೌಡ, ಉದ್ದೇಶ ಪೂರ್ವಕವಾಗಿಯೇ ತನ್ನ ತಾಯಿ ಮತ್ತು ತಂಗಿ ಮೇಲೆ ಟ್ರ್ಯಾಕ್ಟರ್​ನಿಂದ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.

ಟ್ರ್ಯಾಕ್ಟರ್​ ಡಿಕ್ಕಿಯಾದ ರಭಸಕ್ಕೆ ತೀವ್ರ ಗಾಯಗೊಂಡ ಅವರಿಬ್ಬರೂ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಬಳಿಕ ಘಟನೆ ನಡೆದ ಸ್ಥಳದಲ್ಲೇ ಟ್ರ್ಯಾಕ್ಟರ್​ ಬಿಟ್ಟು ಆರೋಪಿ ಪರಾರಿಯಾಗಿದ್ದಾನೆ. ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೃಶ್ಯ ಕಂಡು ಸ್ಥಳೀಯರು ಬೆಚ್ಚಿಬಿದ್ದರು. ಕೌಟುಂಬಿಕ ಕಲಹ ಹಿನ್ನೆಯಲ್ಲಿ ಕೊಲೆ ಮಾಡಲಾಗಿದೆ ಎನ್ನಲಾಗುದೆ. ಸುದ್ದಿ ತಿಳಿಯುತ್ತಿದ್ದಂತೆ ಮಲೇಬೆನ್ನೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

TRENDING