Tuesday, January 26, 2021
Home ಸುದ್ದಿ ಜಾಲ ಚಿಕನ್ ಶಾಪ್ ನ ಮೂರು ಚಾಕುವಿನಲ್ಲಿ 'ಬರ್ಡ್ ಫ್ಲೂ' ವೈರಸ್ ಪತ್ತೆ

ಇದೀಗ ಬಂದ ಸುದ್ದಿ

ಚಿಕನ್ ಶಾಪ್ ನ ಮೂರು ಚಾಕುವಿನಲ್ಲಿ ‘ಬರ್ಡ್ ಫ್ಲೂ’ ವೈರಸ್ ಪತ್ತೆ

ಇಂದೋರ್​: ಮಹಾಮಾರಿ ಕೊರೊನಾ ವೈರಸ್​ ಅಂತ್ಯವಾಗುತ್ತಿರುವ ಸಮಯದಲ್ಲಿ ದೇಶದಲ್ಲಿ ಕಾಣಿಸಿಕೊಂಡಿರುವ ಹಕ್ಕಿಜ್ವರವು ಜನರನ್ನು ಮತ್ತೆ ಆತಂಕಕ್ಕೆ ದೂಡಿದೆ. ಇದೀಗ ಮಧ್ಯಪ್ರದೇಶದ ಇಂದೋರ್​ನ ಚಿಕನ್​ ಶಾಪ್​ಗಳ ಮೂರು ಚಾಕುವಿನಲ್ಲಿ ಬರ್ಡ್​ ಫ್ಲೂ ವೈರಸ್​ ಪತ್ತೆಯಾಗಿರುವುದು ಎಚ್ಚರಿಕೆ ಗಂಟೆಯಾಗಿ ಪರಿಣಮಿಸಿದೆ.

ವೈರಸ್​ ಪತ್ತೆಯಾದ ಬೆನ್ನಲ್ಲೇ ಇಂದೋರ್​ನ ಆಜಾದ್​ ನಗರದ 17 ಶಾಪ್​ಗಳಲ್ಲಿ ಮಾಂಸ ಸೇರಿದಂತೆ ಜೀವಂತ ಕೋಳಿ​ ಮತ್ತು ಮೊಟ್ಟೆಯನ್ನು ವಶಕ್ಕೆ ಪಡೆಯಲಾಗಿದೆ. ಇಂದೋರ್​ನಲ್ಲಿ ಈವರೆಗೂ ಒಟ್ಟು 250 ಕಾಗೆಗಳು ಮೃತಪಟ್ಟಿವೆ. ಆಜಾದ್​ ನಗರದ ಚಿಕನ್​ ಶಾಪ್​ಗಳಲ್ಲಿ ಬಳಸುವ ಮೂರು ಚಾಕುವಿನಲ್ಲಿ ವೈರಸ್​ ಪತ್ತೆಯಾಗಿದ್ದು, ಎಚ್ಚೆತ್ತ ಕಾರ್ಪೊರೇಷನ್ ಸುಮಾರು 17 ಶಾಪ್​ಗಳಿಂದ 197 ಕೋಳಿಗಳು​ ಮತ್ತು 200 ಮೊಟ್ಟೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವಶಕ್ಕೆ ಪಡೆಯಲಾಗಿರುವ ಕೋಳಿಗಳನ್ನು ಕೊಂದು ಗುಂಡಿ ತೋಡಿ ಹೂಳಲಾಗಿದೆ. ಅಲ್ಲದೆ, ಸುಮಾರು ಒಂದು ಕಿ.ಮೀ ವ್ಯಾಪ್ತಿಯಲ್ಲಿರುವ ಚಿಕನ್​ ಶಾಪ್​ಗಳನ್ನು ಮುಚ್ಚಿಸಿ ಸ್ಯಾಟಿಟೈಸ್​ ಮಾಡಿಸಲು ಕಾರ್ಪೊರೇಷನ್ ಸಿದ್ಧವಾಗಿದೆ.

ಇನ್ನು ಹಕ್ಕಿ ಜ್ವರ ಕಾಣಿಸಿಕೊಂಡಾಗಿನಿಂದ ಜನರಲ್ಲಿ ಉಂಟಾಗಿರುವ ಭೀತಿಯಿಂದ ಕೋಳಿ ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ದಿನವೊಂದಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ. ಭಾರತೀಯ ಜನರು ಬೇಯಿಸಿದ ಚಿಕನ್​ ಮಾತ್ರ ಸೇವಿಸುತ್ತಾರೆ. ಹೀಗಾಗಿ ಸುಮಾರು 70 ಡಿಗ್ರಿ ಸೆಲ್ಸಿಯಸ್​ನಲ್ಲಿ ಕೋಳಿ ಮಾಂಸವನ್ನು ಬೇಯಿಸುವುದರಿಂದ ಎಲ್ಲ ರೀತಿಯ ವೈರಸ್​ಗಳು ಸಾಯುತ್ತವೆ ಎಂದು ವೈದ್ಯರು ಸಲಹೆ ನೀಡಿದರು ಕೋಳಿ ಮಾಂಸ ಕೊಳ್ಳಲು ಜನರು ಮುಂದಾಗದಿರುವ ಕಾರಣ ಉದ್ಯಮಕ್ಕೆ ಪೆಟ್ಟು ಬಿದ್ದಿದೆ.

ರಾಜಸ್ಥಾನ, ಕೇರಳ, ಮಧ್ಯಪ್ರದೇಶ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ದಾಖಲಾಗಲಾರಂಭಿಸಿದ್ದು, ಜನರು ಚಿಕನ್​ ತಿನ್ನಲು ಹಿಂದೇಟು ಹಾಕುವಂತಾಗಿದೆ. ಕರ್ನಾಟಕದಲ್ಲೂ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

TRENDING