Tuesday, January 26, 2021
Home ಸುದ್ದಿ ಜಾಲ LIC ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ

ಇದೀಗ ಬಂದ ಸುದ್ದಿ

LIC ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ

ಮುಂಬೈ: ಭಾರತೀಯ ಜೀವ ವಿಮಾ ನಿಗಮ(ಎಲ್‌ಐಸಿ) ಪಾಲಿಸಿ ನವೀಕರಣಕ್ಕೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಪಾಲಿಸಿದಾರರ ಉತ್ತೇಜಿಸುವ ಉದ್ದೇಶದಿಂದ ಲ್ಯಾಪ್ಸ್ ಆಗಿರುವ ವಿಮಾ ಪಾಲಿಸಿಗಳನ್ನು ನವೀಕರಿಸಲು ವಿಶೇಷ ಅಭಿಯಾನ ಆಯೋಜಿಸಲಾಗಿದೆ. ಜನವರಿ 7 ರಿಂದ ಮಾರ್ಚ್ 6 ರವರೆಗೆ ವಿಶೇಷ ಅಭಿಯಾನ ನಡೆಯಲಿದ್ದು, ಗ್ರಾಹಕರು ತಮ್ಮ ಲ್ಯಾಪ್ಸ್ ಆದ ಎಲ್‌ಐಸಿ ಪಾಲಿಸಿಗಳನ್ನು ನವೀಕರಿಸಿಕೊಳ್ಳಬಹುದಾಗಿದೆ.

ಪ್ರೀಮಿಯಂ ಕಟ್ಟದೆ ವಿಮೆ 5 ವರ್ಷಗಳೊಳಗೆ ಲ್ಯಾಪ್ಸ್ ಆಗಿದ್ದರೆ ನವೀಕರಿಸಬಹುದು. ಇದಕ್ಕಾಗಿ ವಿಶೇಷ ವೈದ್ಯಕೀಯ ಪರೀಕ್ಷೆ ಅಗತ್ಯ ಇರುವುದಿಲ್ಲ. ನಷ್ಟವಾಗಿರುವ ಎಲ್‌ಐಸಿ ಪಾಲಿಸಿ ನವೀಕರಣಕ್ಕೆ ಈ ಅವಕಾಶ ಬಳಸಿಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.

ದಿ ನ್ಯೂಸ್ 24 ಕನ್ನಡ

TRENDING