Saturday, January 16, 2021
Home ಜಿಲ್ಲೆ ಬಾಗಲಕೋಟೆ ಬಾಗಲಕೋಟೆ : ಮಂಚದ ಮೇಲಿಂದ ಬಿದ್ದು 9 ವರ್ಷದ ಮಗು ಸಾವು

ಇದೀಗ ಬಂದ ಸುದ್ದಿ

ಬಾಗಲಕೋಟೆ : ಮಂಚದ ಮೇಲಿಂದ ಬಿದ್ದು 9 ವರ್ಷದ ಮಗು ಸಾವು

ಬಾಗಲಕೋಟೆ :  ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿಯ ವಿದ್ಯಾನಗರ ಬಡಾವಣೆಯ 9 ವರ್ಷದ ಮಗು ಅಪೂರ್ವಾ ಸೋಮಶೇಖರ ಕುಳ್ಳೋಳ್ಳಿ ಕಳೆದ ವಾರ ರಾತ್ರಿ ಹೊತ್ತು ಮಲಗಿಕೊಂಡ ಸಂದರ್ಭ ಕನಸೊಂದು ಮಗು ಕಾಣುವ ಸಂದರ್ಭ ಮಂಚದ ಮೇಲಿಂದ ನೆಲಕ್ಕೆ ಬಿದ್ದ ಪರಿಣಾಮ ತಲೆಗೆ ಭಾರಿ ಒಳಪೆಟ್ಟು ಬಿದ್ದಿತ್ತು.

ಮರುದಿನ ಬೆಳಗಿನ ಜಾವ ಸ್ಥಳೀಯ ಖಾಸಗಿ ಆಸ್ಪತ್ರೆಗೆ ತೆರಳಿ, ನಂತರ ಹೆಚ್ಚಿನ ಚಿಕಿತ್ಸೆಗೆಂದು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ತೆರಳಿ ಮೆದುಳಿನ ಭಾಗದಲ್ಲಿನ ಸಮಸ್ಯೆ ಆಗಿನ ಸಂದರ್ಭ ನಿವಾರಣೆ ಕಂಡಿತ್ತು. ದಿ.2 ರಂದು ಹುಟ್ಟು ಹಬ್ಬವನ್ನೂ ಆಚರಿಸಿಕೊಂಡಿದ್ದಳು.

ಚೇತರಿಸಿಕೊಂಡು ಗುಣಮುಖವಾಗಿ ಮರಳಿ ರಬಕವಿಗೆ ಬಂದಿದ್ದಾಳೆ. ನಂತರ ಮರುದಿನ ದಿ.3 ರಂದು ಮತ್ತೇ ತಲೆಯಲ್ಲಿ ನೋವು ಸಮಸ್ಯೆ ಎದುರಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದದ್ದನ್ನು ಕಂಡು ಮತ್ತೆ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಮಗುಅಪೂರ್ವಾ ಸಾವನ್ನಪ್ಪಿದ ಘಟನೆ ನಡೆದಿದೆ.ಈ ಮಗುವಿನ ಸಾವು ರಬಕವಿ-ಬನಹಟ್ಟಿ ಜನತೆಯು ಮಮ್ಮಲ ಮರಗುವಂತೆ ಮಾಡಿದೆ.

ಪ್ರಕಾಶ ಕುಂಬಾರ

ಬಾಗಲಕೋಟೆ

TRENDING