Wednesday, January 27, 2021
Home ಬೆಂಗಳೂರು ಸಾರಿಗೆ ಇಲಾಖೆಯಿಂದ ವಾಹನ ಮಾಲೀಕರಿಗೆ ಮಹತ್ವದ ಮಾಹಿತಿ

ಇದೀಗ ಬಂದ ಸುದ್ದಿ

ಸಾರಿಗೆ ಇಲಾಖೆಯಿಂದ ವಾಹನ ಮಾಲೀಕರಿಗೆ ಮಹತ್ವದ ಮಾಹಿತಿ

ಬೆಂಗಳೂರು : ಸಾರಿಗೆ ಇಲಾಖೆಯು ವಾಹನ ಮಾಲೀಕರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಭಾರತ್ ಸ್ಟೇಜ್ 4 ರ ವಾಹನ ನೋಂದಾಯಿಸಿಕೊಳ್ಳಲು ಜನವರಿ 16 ರವರೆಗೆ ಅವಕಾಶ ನೀಡಿದೆ.

ಸರ್ವೋಚ್ಚ ನ್ಯಾಯಾಲಯದ ಆದೇಶದ ಅನ್ವಯ 2020 ರ ಮಾರ್ಚ್ 31 ಕ್ಕಿಂತ ಮೊದಲು ಮಾರಾಟವಾಗಿ ಇ ವಾಹನ್ ಪೋರ್ಟ್ ವಿವರಗಳನ್ನು ದಾಖಲಿಸಿ ತಾತ್ಕಾಲಿಕ ನೋಂದಣಿ ಹೊಂದಿರುವ ಮತ್ತು ಆನ್ ಲೈನ್/ಆಫ್ ಲೈನ್ ಮೂಲಕ ತೆರಿಗೆ ಹಾಗೂ ಶುಲ್ಕ ಪಾವತಿಸಿರುವ, ನೋಂದಣಿ ಬಾಕಿ ಇರುವ ಭಾರತ್ ಸ್ಟೇಜ್-4 ವಾಹನಗಳನ್ನು ಈ ಅವಧಿಯೊಳಗೆ ನೋಂದಣಿ ಮಾಡಿಸುವಂತೆ ಸಾರಿಗೆ ಇಲಾಖೆ ಗಡುವು ನೀಡಿದೆ.

TRENDING