Tuesday, January 26, 2021
Home ಸುದ್ದಿ ಜಾಲ SBI ಗ್ರಾಹಕರಿಗೆ ಇಲ್ಲಿದೆ ಮುಖ್ಯ ಮಾಹಿತಿ..!

ಇದೀಗ ಬಂದ ಸುದ್ದಿ

SBI ಗ್ರಾಹಕರಿಗೆ ಇಲ್ಲಿದೆ ಮುಖ್ಯ ಮಾಹಿತಿ..!

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಹಾಗೂ ಇಂಡಿಯನ್​ ಆಯಿಲ್​ ಕಾರ್ಪೋರೇಷನ್​ ಲಿಮಿಟೆಡ್​ ಸಹಭಾಗಿತ್ವದಲ್ಲಿ ಸಂಪರ್ಕ ರಹಿತ ರೂಪೇ ಡೆಬಿಟ್​ ಕಾರ್ಡ್​ನ್ನು ಬಿಡುಗಡೆ ಮಾಡೋದಾಗಿ ಘೋಷಣೆ ಮಾಡಿದೆ.

ದೇಶಾದ್ಯಂತ ಪ್ರಾರಂಭಿಸಲಾದ ಈ ಕಾರ್ಡ್​ನ್ನ ಇಂಡಿಯನ್​ ಆಯಿಲ್​​ ಕೇಂದ್ರದಲ್ಲಿ ಪ್ರತಿ ಬಾರಿ ಬಳಕೆ ಮಾಡಿದಾಗಲೂ ಪ್ರತಿ 200 ರೂಪಾಯಿಗೆ 6 ಪಟ್ಟು ಬಹುಮಾನ ಅಂಕ ಹಾಗೂ ಇಂಧನ ಖರೀದಿಗೆ 0.75 ಪ್ರತಿಶತ ಲಾಯಲಿಟಿ ಪಾಯಿಂಟ್​ ಸಿಗಲಿದೆ.

ಗ್ರಾಹಕರು ಹೋಟೆಲ್, ಚಲನಚಿತ್ರ, ದಿನಸಿ ಸೇರಿದಂತೆ ವಿವಿಧ ಬಿಲ್​ಗಳಿಗಾಗಿ ಪ್ರತಿಫಲ ಅಂಕಗಳನ್ನ ಗಳಿಸಬಹುದಾಗಿದೆ. ಇಂಧನ ಖರೀದಿಗಂತೂ ಯಾವುದೇ ಮಿತಿಯಿಲ್ಲದೇ ದೇಶಾದ್ಯಂತ ಈ ಕಾರ್ಡ್​ನ್ನ ಬಳಕೆ ಮಾಡಬಹುದಾಗಿದೆ. ಎಸ್​ಬಿಐ ಶಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವ ಮೂಲಕ ಸಂಪರ್ಕ ರಹಿತ ರೂಪೇ ಡೆಬಿಟ್​ ಕಾರ್ಡ್​ನ್ನ ಹೊಂದಬಹುದಾಗಿದೆ.

ಸಂಪರ್ಕರಹಿತ ಕಾರ್ಡ್​ನಲ್ಲಿ ಒಂದೇ ಟ್ಯಾಪ್​ನಲ್ಲಿ 5000 ರೂಪಾಯಿವರೆಗೆ ವಹಿವಾಟು ಮಾಡಬಹುದಾಗಿದೆ. ಈ ಕಾರ್ಡ್ ನಲ್ಲಿ ಆಕರ್ಷಕ ಆಫರ್​ಗಳನ್ನ ನೀಡೋದಾಗಿ ಬ್ಯಾಂಕ್​ ಹೇಳಿದೆ.

TRENDING