Sunday, January 24, 2021
Home ಸುದ್ದಿ ಜಾಲ 'ಕೆ-ಸೆಟ್ ಪರೀಕ್ಷೆ' ಬರೆದಿದ್ದ ಪರೀಕ್ಷಾರ್ಥಿಗಳಿಗೆ ಬಹುಮುಖ್ಯ ಮಾಹಿತಿ

ಇದೀಗ ಬಂದ ಸುದ್ದಿ

‘ಕೆ-ಸೆಟ್ ಪರೀಕ್ಷೆ’ ಬರೆದಿದ್ದ ಪರೀಕ್ಷಾರ್ಥಿಗಳಿಗೆ ಬಹುಮುಖ್ಯ ಮಾಹಿತಿ

ಮೈಸೂರು : ಮೈಸೂರು ವಿಶ್ವವಿದ್ಯಾಲಯದಿಂದ 2020ರ ಸೆಪ್ಟೆಂಬರ್ ನಲ್ಲಿ ನಡೆಸಲಾಗಿದ್ದಂತ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ(ಕೆ-ಸೆಟ್) ಫಲಿತಾಂಶವನ್ನು ಜನವರಿ 9ರಂದು ಪ್ರಕಟಗೊಳ್ಳಲಿದೆ.

ಈ ಕುರಿತಂತೆ ಮೈಸೂರು ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದ್ದು, 2020ರ ಸೆಪ್ಟೆಂಬರ್ ನಲ್ಲಿ ನಡೆದಿದ್ದ ಫಲಿತಾಂಶವನ್ನು ಜನವರಿ 9ರಂದು www.kset.uni-mysore.ac.in ಜಾಲತಾಣದಲ್ಲಿ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದೆ.

ಇನ್ನು 2020ರ ಸೆಪ್ಟೆಂಬರ್ ನಲ್ಲಿ ನಡೆದಿದ್ದಂತ ಕೆ-ಸೆಟ್ ಪರೀಕ್ಷೆಯಲ್ಲಿ ರಾಜ್ಯದ 11 ಕೇಂದ್ರಗಳಲ್ಲಿ 41 ವಿಷಯಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಅರ್ಜಿ ಸಲ್ಲಿಸಿದ್ದ 1.06 ಲಕ್ಷ ವಿದ್ಯಾರ್ಥಿಗಳಲ್ಲಿ ಸುಮಾರು 80 ಸಾವಿರ ಮಂದಿ ಪರೀಕ್ಷೆಗೆ ಹಾಜರಾಗಿದ್ದರು.

TRENDING