Sunday, January 24, 2021
Home ಸುದ್ದಿ ಜಾಲ ಸಿಸಿಬಿ ಜಪ್ತಿ ಮಾಡಿರುವ ಕಾರು ನನ್ನದೇ.ಎಂದ ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು

ಇದೀಗ ಬಂದ ಸುದ್ದಿ

ಸಿಸಿಬಿ ಜಪ್ತಿ ಮಾಡಿರುವ ಕಾರು ನನ್ನದೇ.ಎಂದ ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು

ಚಿಕ್ಕನಾಯಕನಹಳ್ಳಿ: ಕೋಟ್ಯಂತರ ರೂಪಾಯಿ ವಂಚನೆ ಆರೋಪಿ ಯುವರಾಜ್​ ಅಲಿಯಾಸ್​ ಸೇವಾಲಾಲ್​ ಸ್ವಾಮಿ ಪ್ರಕರಣದಲ್ಲಿ ಜೆಡಿಎಸ್​ ಮಾಜಿ ಶಾಸಕ ಸಿ.ಬಿ.ಸುರೇಶ್​ಬಾಬು ಹೆಸರು ಹರಿದಾಡುತ್ತಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ.

ಯುವರಾಜ್​ ಬಳಿಯಿಂದ ಸಿಸಿಬಿ ಜಪ್ತಿ ಮಾಡಿರುವ ಎರಡು ಐಷಾರಾಮಿ ಕಾರುಗಳ ಪೈಕಿ ರೇಂಜ್​ ರೋವರ್​ ಕಾರು ಸುರೇಶ್​ಬಾಬು ಹೆಸರಿನಲ್ಲಿದ್ದು, ಯುವರಾಜ್​ಗೆ ರಾಜಕಾರಣಿಗಳ ಜತೆ ನಂಟು ಇರುವುದು ಒಂದೊಂದಾಗಿ ಬೆಳಕಿಗೆ ಬರುತ್ತಿದೆ. 75 ಲಕ್ಷ ರೂ.ಗೆ ಸುರೇಶ್​ಬಾಬು ಬಳಿಯಿಂದ ಕಾರನ್ನು ಖರೀದಿಸಿರುವ ಯುವರಾಜ್​ ಈವರೆಗೆ ತನ್ನ ಹೆಸರಿಗೆ ಮಾಲೀಕತ್ವ ಬದಲಿಸಿಕೊಂಡಿಲ್ಲ. 

75 ಲಕ್ಷ ರೂ.ಚೆಕ್​: ಒಂದೂವರೆ ಕೋಟಿ ರೂ. ಮೌಲ್ಯದ 2019ರ ಮಾಡೆಲ್​ ರೇಂಜ್​ ರೋವರ್​ ಸ್ಪೋರ್ಟ್​ ಡೀಸೆಲ್​ ಕಾರನ್ನು ಕಳೆದ ವರ್ಷ 75 ಲಕ್ಷ ರೂ. ಗೆ ಯುವರಾಜ್​ ಖರೀದಿಸಿದ್ದರು. 75 ಲಕ್ಷ ರೂಪಾಯಿಯನ್ನು ಚೆಕ್​ ರೂಪದಲ್ಲಿ ನೀಡಿದ್ದು, ಆ ಚೆಕ್​ ದಾಖಲೆಗಳನ್ನು ಸುರೇಶ್​ಬಾಬು ಇನ್ನೂ ಇಟ್ಟಿದ್ದಾರೆ. ಡಿಲಿವರಿನೋಟ್​ಗೆ ಸಹ ಸುರೇಶ್​ಬಾಬು ಸಹಿ ಹಾಕಿದ್ದಾರೆ. ಆದರೆ, ಈವರೆಗೆ ಯುವರಾಜ್​ ತನ್ನ ಹೆಸರಿಗೆ ಕಾರನ್ನು ಮಾಡಿಸಿಕೊಳ್ಳದೆ ಇರುವುದು ಹಲವು ಅನುಮಾನಿಗಳಿಗೆ ಎಡೆ ಮಾಡಿಕೊಟ್ಟಿದೆ. 

ಕಾರು ಖರೀದಿಸುವ ವೇಳೆ 50 ಲಕ್ಷ ರೂ. ಬ್ಯಾಂಕ್​ ಸಾಲ ಪಡೆಯಲಾಗಿತ್ತು. ಕರೊನಾ ಸಂದರ್ಭದಲ್ಲಿ ಯುವರಾಜ್​ ಸಾಲದ ಕಂತು ಕಟ್ಟಲಿಲ್ಲ ಎಂಬುದು ತಿಳಿದುಬಂದಿದೆ. ಅವರಿಗೆ ಕಾರು ಮಾರಿರುವ ಸಂಬಂಧದ ಎಲ್ಲ ವ್ಯವಹಾರ ಪತ್ರಗಳು ನನ್ನ ಬಳಿ ಇದ್ದು, ಅದನ್ನು ಸಿಸಿಬಿಯವರಿಗೆ ತಲುಪಿಸಿದ್ದಾನೆ. ಕಾರಿನ ಮಾರಾಟ ವ್ಯವಹಾರಿಕ ಸಂಬಂಧ ಹೊರತುಪಡಿಸಿ ನನಗೂ ಆತನಿಗೂ ಯಾವುದೇ ಬೇರೆ ರೀತಿಯ ಸಂಬಂಧವಿಲ್ಲ ಎಂದು ಸುರೇಶ್​ಬಾಬು ‘ವಿಜಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.

ನನ್ನ ಕಾರನ್ನು ಅವರಿಗೆ ವರ್ಷದ ಹಿಂದೆಯೇ ಮಾರಾಟ ಮಾಡಿದ್ದೆ. ಅದರೆ, ವ್ಯವಹಾರ ಪೂರ್ಣಗೊಳಿಸಿಕೊಂಡಿಲ್ಲ. ಕಾರಿನ ಮೇಲೆ ಸಾಲ ಕೂಡ ಇದೆ. ಒಳ್ಳೆಯ ವ್ಯಕ್ತಿ ಎಂದು ಯಾರೋ ಆತನನ್ನು ಪರಿಚಯಿಸಿದ್ದರು. ನನ್ನ ಕಾರಿನ ರಿಜಿಸ್ಟ್ರೇಷನ್ನಂಬರ್​ (123) ವಿಶೇಷವಾಗಿದ್ದರಿಂದ ಖಯಾಲಿಗೆ ಆತ ನನ್ನ ಬಳಿ ಖರೀದಿಸಿದ್ದರು. ಬಗ್ಗೆ ಸಿಸಿಬಿ ಪೊಲೀಸರೊಂದಿಗೆ ಮಾತನಾಡಿ ವ್ಯವಾಹಾರ ಬಗೆಹರಿಸಿಕೊಳ್ಳುತ್ತೇನೆ.

TRENDING