ನವದೆಹಲಿ : ಇಂದು ಬೆಳ್ಳಂಬೆಳಗ್ಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ದಿಗ್ಲಿಪುರದಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆ ದಾಖಲಾಗಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸೆೆಯಿಸ್ಮ್ಯಾಜಿ (ಎನ್ ಸಿಎಸ್) ತಿಳಿಸಿದೆ.
ಇಂದು ಬೆಳಗ್ಗೆ 6.57 ರ ಸುಮಾರಿಗೆ ಭೂಕಂಪನ ಸಂಭವಿಸಿದ್ದು, ಕ್ಯಾಂಪ್ ಬೆಲ್ ಕೊಲ್ಲಿಯ ಆಗ್ನೇಯಕ್ಕೆ 2 ಕಿ.ಮೀ ದೂರದಲ್ಲಿ ಭೂಕಂಪ ಸಂಭವಿಸಿದೆ.ಭೂಕಂಪನದಿಂದ ಯಾವುದೇ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ.