Monday, January 25, 2021
Home ಕೋವಿಡ್-19 ರಾಜ್ಯದಲ್ಲಿಇಂದು 761 ಮಂದಿಗೆ ಕೊರೊನಾ ಪತ್ತೆ, 7 ಮಂದಿ ಬಲಿ

ಇದೀಗ ಬಂದ ಸುದ್ದಿ

ರಾಜ್ಯದಲ್ಲಿಇಂದು 761 ಮಂದಿಗೆ ಕೊರೊನಾ ಪತ್ತೆ, 7 ಮಂದಿ ಬಲಿ

 ಬೆಂಗಳೂರು : ಕಿಲ್ಲರ್ ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಇಂದು 7 ಮಂದಿ ಬಲಿಯಾಗಿದ್ದು, ಮೂಲಕ ಕೊರೊನಾ ಸಾವಿನ ಸಂಖ್ಯೆ 12131 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇಂದು 761 ಮಂದಿಗೆ ಕೊರೊನಾ ಸೋಂಕು ಧೃಡವಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 924898 ಕ್ಕೆ ಏರಿಕೆಯಾಗಿದೆ.ರಾಜ್ಯದಲ್ಲಿ ಇಂದು 812 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇದುವರೆಗೆ 903629 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ 205 ಮಂದಿ ಐಸಿಯನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಇಂದು 399 ಮಂದಿಗೆ ಸೋಂಕು ಧೃಡವಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 391184 ಕ್ಕೆ ಏರಿಕೆಯಾಗಿದೆ. ಕಿಲ್ಲರ್ ಕೊರೊನಾ ಸೋಂಕಿಗೆ ಬೆಂಗಳೂರಿನಲ್ಲಿ 5 ಮಂದಿ ಬಲಿಯಾಗಿದ್ರೆ, ಕೊರೊನಾ ಸಾವಿನ ಸಂಖ್ಯೆ 4341 ಕ್ಕೆ ಏರಿಕೆಯಾಗಿದೆ.

TRENDING