ದಕ್ಷಿಣ ಕನ್ನಡ : ಹಿಮಾಚಲ ಪ್ರದೇಶ, ಕೇರಳ, ರಾಜಸ್ಥಾನ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಇತ್ತ ರಾಜ್ಯದಲ್ಲೂ ಹಕ್ಕಿ ಜ್ವರದ ಬಗ್ಗೆ ಕಚ್ಚೆಟ್ಟರ ವಹಿಸಲಾಗಿದೆ. ಇದರ ಮಧ್ಯೆಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6 ಕಾಗೆಗಳು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಹೀಗಾಗಿ ರಾಜ್ಯದಲ್ಲೂ ಹಕ್ಕಿ ಜ್ವರ ಕಾಣಿಸಿಕೊಂಡು ಬಿಡ್ತಾ ಎನ್ನುವ ಭೀತಿ ಶುರುವಾಗಿದೆ.
ಇಂದು ಜಮ್ಮುವಿನ ಉದಂಪುರ್ ಜಿಲ್ಲೆಯಲ್ಲಿ 150 ಕಾಗೆಗಳು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಆದ್ರೇ ಅನಿಮಲ್ ಹಸ್ ಬ್ಯಾಂಡರಿ ಅಧಿಕಾರಿ ಡಾ.ಇಂದ್ರಜಿತ್ ಸಿಂಗ್ ಕಾಗೆಗಳು ಕೋಲ್ಡ್ ನಿಂದ ಸಾವನ್ನಪ್ಪಿದ್ದಾವೆ ಎಂಬುದಾಗಿ ದೃಢಪಡಿಸಿದ್ದಾರೆ.
ಇದ ಮಧ್ಯೆ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6 ಕಾಗೆಗಳು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಇಂತಹ ಕಾಗೆಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಇಂತಹ ವರದಿ ಬಂದ ನಂತ್ರ ಕಾಗೆಗಳು ಹಕ್ಕಿ ಜ್ವರದಿಂದ ಸಾವನ್ನಪ್ಪಿದ್ದಾವಾ ಎನ್ನುವ ಮಾಹಿತಿ ದೃಢಪಡಬೇಕಿದೆ.