Friday, January 22, 2021
Home ಜಿಲ್ಲೆ ಧಾರವಾಡ ಯೋಗೀಶಗೌಡ ಕೊಲೆ ಪ್ರಕರಣ : ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

ಇದೀಗ ಬಂದ ಸುದ್ದಿ

ಯೋಗೀಶಗೌಡ ಕೊಲೆ ಪ್ರಕರಣ : ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

ಧಾರವಾಡ ; ಯೋಗೀಶಗೌಡ ಕೊಲೆ ಪ್ರಕರಣದ ಅರೋಪದಡಿ ಬಂಧನದಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದಕ್ಕೆ ಹೋಗಿದೆ.

ಇಂದು ಧಾರವಾಡ ಹೈಕೋಟ್೯ನಲ್ಲಿ ವಿನಯ್ ಜಾಮೀನು ಅರ್ಜಿ ವಿಚಾರಣೆಗೆ ಬಂದಿತ್ತು. ಅಷ್ಟೆ ಅಲ್ಲ ಇಂದು ಜಾಮೀನು ಸಿಗುವ ನಿರೀಕ್ಷೆ ಕೂಡ ಅವರ ಅಭಿಮಾನಿಗಳಿಗೆ ಇತ್ತು. ಆದರೆವಸಿಬಿಐ ಅಧಿಕಾರಿಗಳು ವಿನಯ್ ಅವರಿಗೆ ಯಾಕೆ ಜಾಮೀನು ನೀಡಬಾರದು ಎನ್ನುವ ಕುರಿತು ತಕರಾರು ಸಲ್ಲಿಸಿದ್ದು ಇದರ ವಿಚಾರಣೆಯನ್ನು ಹೈಕೋಟ್೯ ಮುಂದಿನವಾರಕ್ಕೆ ಮುಂದೂಡಿತು.

ಸದ್ಯಕ್ಕೆ ವಿನಯ್ ಬೆಳಗಾವಿ ಹಿಂಡಲಗಾ ಜೈಕಿನಲ್ಲೆ ಇದ್ದಾರೆ. ಅವರ ಬಿಡುಗಡೆಯಾಗಲಿ ಎಂದು ಅವರ ಅಭಿಮಾನಿಗಳು ಮತ್ತು ಬಂಧುಗಳು ಕಳೆದ ಒಂದುವಾರದಿಂದ ದೇವರಿಗೆ ವಿಶೇಷ ಪೂಜೆ ಪ್ರಾರ್ಥನೆ ಹಮ್ಮಿಕೊಮಡಿದ್ದರು.

TRENDING