Monday, January 25, 2021
Home ಸುದ್ದಿ ಜಾಲ ನನ್ನ ಬಾಯಿಗೆ ಯಾರೂ ಬೀಗಹಾಕಿಲ್ಲ: ಶಾಸಕ ಯತ್ನಾಳ್

ಇದೀಗ ಬಂದ ಸುದ್ದಿ

ನನ್ನ ಬಾಯಿಗೆ ಯಾರೂ ಬೀಗಹಾಕಿಲ್ಲ: ಶಾಸಕ ಯತ್ನಾಳ್

 ಬೆಂಗಳೂರು,ಜ.6- ತಾವು ಮಾತನಾಡಬಾರದು ಎಂದು ಪಕ್ಷದ ಹೈಕಮಾಂಡ್ ಯಾವುದೇ ಸೂಚನೆ ಕೊಟ್ಟಿಲ್ಲ. ತಮ್ಮ ಬಾಯಿಗೆ ಬೀಗವೂ ಹಾಕಿಲ್ಲ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವಾಗ ಮೌನವಾಗಿರಬೇಕು, ಯಾವಾಗ ಮಾತನಾಡಬೇಕು ಎಂಬುದು ಗೊತ್ತಿದೆ. ಮುಖ್ಯಮಂತ್ರಿಯವರು ಕರೆದಿದ್ದ ಶಾಸಕರ ಸಭೆಯಲ್ಲಿ ನಮ್ಮ ಕಷ್ಟನಷ್ಟ ಹೇಳಿಕೊಂಡಿದ್ದೇವೆ. ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಇನ್ನೊಂದು ತಿಂಗಳು ಕಾರ್ಯವೈಖರಿಯನ್ನು ಕಾದುನೋಡುತ್ತೇವೆ ಎಂದರು.

ಉಪಮುಖ್ಯಮಂತ್ರಿ ಗೋವಿಂದಕಾರಜೋಳ ಹಾಗೂ ಸಚಿವ ಸೋಮಣ್ಣ ಅವರು ಅವರ ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕಾರಜೋಳ ಹೇಳಿದಂತೆ ಶಾಸಕರ ಸಭೆಯಲ್ಲಿ ಮುಖ್ಯಮಂತ್ರಿಗೆ ನಿಷ್ಠೆ ತೋರಿಸಲು ಒಬ್ಬರೇ ಶಾಸಕರು ಗಲಾಟೆ ಮಾಡಿದರು. ಉಪಮುಖ್ಯಮಂತ್ರಿಗಳೇ ಅವರ ಹೆಸರನ್ನು ಪ್ರಸ್ತಾಪ ಮಾಡದಿರುವಾಗ ನಾನೇಕೆ ಅವರ ಹೆಸರನ್ನು ಪ್ರಸ್ತಾಪಿಸಲಿ ಎಂದು ಪ್ರಶ್ನಿಸಿದರು.

ಅಭಿವೃದ್ಧಿ ವಿಚಾರಕ್ಕೆ ನಾವು ಮಾತನಾಡುತ್ತೇವೆ. ಸರ್ಕಾರಕ್ಕೆ ಇರಿಸುಮುರಿಸು ತರಿಸುವ ಉದ್ದೇಶ ನಮಗಿಲ್ಲ. ಅಭಿವೃದ್ದಿಗೆ ಸಂಬಂಧಿಸಿದಂತೆ ಮಾತನಾಡುತ್ತೇನೆ. ಸದನದಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಕೋವಿಡ್ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳ ದುಬಾರಿ ಶುಲ್ಕದ ಬಗ್ಗೆಯೂ ಪ್ರಸ್ತಾಪ ಮಾಡಿದ್ದೆ ಎಂದರು.

ಶಾಲೆಗಳು ಪೋಷಕರಿಂದ ಒಂದು ವರ್ಷದ ಶುಲ್ಕ ಕಟ್ಟುವಂತೆ ಒತ್ತಡ ಹೇರುವುದು ಸರಿಯಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಗಟ್ಟಿ ನಿರ್ಧಾರ ಕೈಗೊಂಡು ನಿಯಮ ರೂಪಿಸಬೇಕು, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೂ ಸಹಾಯ ಮಾಡಬೇಕೆಂದು ಇದೇ ಸಂದರ್ಭದಲ್ಲಿ ತಿಳಿಸಿದರು.

TRENDING