Thursday, January 21, 2021
Home ಸುದ್ದಿ ಜಾಲ ಟಾಲಿವುಡ್‍ ಚಿತ್ರರಂಗದ ಖ್ಯಾತ ಗೀತರಚನಕಾರ ರಾಜೇಶ್ವರಪ್ರಸಾದ್ ನಿಧನ

ಇದೀಗ ಬಂದ ಸುದ್ದಿ

ಟಾಲಿವುಡ್‍ ಚಿತ್ರರಂಗದ ಖ್ಯಾತ ಗೀತರಚನಕಾರ ರಾಜೇಶ್ವರಪ್ರಸಾದ್ ನಿಧನ

ಹೈದ್ರಾಬಾದ್, ಜ. 6- ಟಾಲಿವುಡ್ ಚಿತ್ರರಂಗದಲ್ಲಿ 3 ದಶಕಕ್ಕೂ ಹೆಚ್ಚು ಕಾಲ ಗೀತರಚನಕಾರ ಹಾಗು ಸಂಭಾಷಣೆಗಾರರಾಗಿ ಗುರುತಿಸಿಕೊಂಡಿರುವ ವೆನ್ನಲಕಂಟಿ ರಾಜೇಶ್ವರಪ್ರಸಾದ್ ಅವರು ಹೃದಯಾಘಾತದಿಂದಾಗಿ ಇಹಲೋಕ ಯಾತ್ರೆ ಮುಗಿಸಿದ್ದಾರೆ. 1957ರಲ್ಲಿ ನೆಲ್ಲೂರಿನಲ್ಲಿ ಜನಿಸಿದ ವೆನ್ನಲಕಂಟಿ ರಾಜೇಶ್ವರಪ್ರಸಾದ್ ಅವರು 1986ರಲ್ಲಿ ಶ್ರೀ ರಾಮಚಂದ್ರಡು ಎಂಬ ಗೀತೆಯನ್ನು ರಚಿಸುವ ಮೂಲಕ ಚಿತ್ರಲೋಕಕ್ಕೆ ಎಂಟ್ರಿ ಕೊಟ್ಟು ಇದುವರೆಗೂ 2000ಕ್ಕೂ ಹೆಚ್ಚು ಗೀತೆಗಳು ಹಾಗೂ 300ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಭಾಷಣೆಯನ್ನು ಬರೆದಿದ್ದಾರೆ.

ಚಿರಂಜೀವಿ ಅಭಿನಯದ ಘರಾನಾಬುಲ್ಲೊಡು, ನಂದಮುರಿ ಬಾಲಕೃಷ್ಣ ನಟನೆಯ ಸಮರಸಿಂಹರೆಡ್ಡಿ, ಆದಿತ್ಯ 369, ಅಕ್ಕಿನೇನಿ ನಾಗಾರ್ಜುನ ನಟಿಸಿದ್ದ ಕ್ರಿಮಿನಲ್, ಮಹೇಶ್‍ಬಾಬು ಅಭಿನಯದ ತಕಕರಿಡೊಂಗಾ, ಕೀರ್ತಿ ಸುರೇಶ್ ಅವರ ಪೆಂಗ್ವಿನ್ ಸೇರಿದಂತೆ ಹಲವಾರು ಚಿತ್ರಗಳು ವೆನ್ನಲಕಂಟಿ ರಾಜೇಶ್ವರಪ್ರಸಾದ್ ಅವರಿಗೆ ಹೆಸರು ತಂದುಕೊಟ್ಟಿದ್ದವು.

ಇವರು ಕೊನೆಯ ಬಾರಿಗೆ ಗೀತ ರಚನೆ ಮಾಡಿದ್ದ ಪೆಂಗ್ವಿನ್ ಚಿತ್ರವು ಒಟಿಟಿಯಲ್ಲಿ ರಿಲೀಸ್ ಆಗಿದ್ದರೂ ಅವರ ಸಾಹಿತ್ಯಕ್ಕೆ ಹೆಚ್ಚು ಮನ್ನಣೆ ದೊರಕಿತು. ವೆನ್ನಲಕಂಟಿ ರಾಜೇಶ್ವರಪ್ರಸಾದ್ ಅವರು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದು, ಅವರ ನಿಧನದಿಂದಾಗಿ ತೆಲುಗು ಚಿತ್ರರಂಗವು ಉತ್ತಮ ಸಾಹಿತ್ಯಗಾರ ಹಾಗೂ ಸಂಭಾಷಣೆಗಾರನನ್ನು ಕಳೆದುಕೊಂಡಂತಾಗಿದೆ ಎಂದು ಟಾಲಿವುಡ್‍ನ ಕಲಾವಿದರು ಹಾಗೂ ತಂತ್ರಜ್ಞರು ಕಂಬನಿ ಮಿಡಿದಿದ್ದಾರೆ.

TRENDING