Saturday, January 16, 2021
Home ಚಿಕ್ಕಬಳ್ಳಾಪುರ ಚಿಕ್ಕಬಳ್ಳಾಪುರ : ನೆಚ್ಚಿನ ನಟನ ನೋಡಲು ಅಭಿಮಾನಿಗಳ ಸಾಗರ

ಇದೀಗ ಬಂದ ಸುದ್ದಿ

ಚಿಕ್ಕಬಳ್ಳಾಪುರ : ನೆಚ್ಚಿನ ನಟನ ನೋಡಲು ಅಭಿಮಾನಿಗಳ ಸಾಗರ

 ಚಿಕ್ಕಬಳ್ಳಾಪುರ : ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ,ತೆಲುಗು ದೇಶಂ ಪಕ್ಷದ ಸಂಸ್ಥಾಪಕ ಹಾಗೂ ತೆಲುಗರ ಆರಾಧ್ಯ ದೈವ ದಿವಂಗತ ಎನ್. ಟಿ. ರಾಮರಾವ್ ಅವರ ಪುತ್ರ ತೆಲುಗು ಚಿತ್ರರಂಗದ ಖ್ಯಾತ ನಟ ಹಾಗೂ ಹಿಂದೂಪುರ ವಿಧಾನಸಭಾ ಕ್ಷೇತ್ರದ ಶಾಸಕರು ಆದಂಥ ನಂದಮೂರಿ  ಬಾಲಕೃಷ್ಣ

ಇಂದು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ   ಹಿಂದೂಪುರ ಕ್ಷೇತ್ರಕ್ಕೆ ಹೋಗಲು ರಸ್ತೆ ಮಾರ್ಗವಾಗಿ ಗೌರಿಬಿದನೂರು ಮುಖಾಂತರ ಹಾದು ಹೋಗಿದ್ದು,ಸುದ್ದಿ ತಿಳಿದ ಸಾವಿರಾರು ನಂದಮೂರಿ ಬಾಲಕೃಷ್ಣ  ಅಭಿಮಾನಿಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ  ವಿದುರಾಶ್ವತ್ಥ ಗೇಟ್ ಬಳಿ  ರಸ್ತೆಯ ಎರಡೂ ಕಡೆ ನಿಂತು ಸ್ವಾಗತ ಕೋರಿ ಅವರ ಕಾರನ್ನು ತಡೆದು ಮಾಲಾರ್ಪಣೆ ಮಾಡಿ ತಮ್ಮ ಅಭಿಮಾನ ಮೆರೆದಿದ್ದಾರೆ.

ಅಭಿಮಾನಿಗಳನ್ನು ಕಂಡು ತಕ್ಷಣ ತಮ್ಮ ವಾಹನವನ್ನು ನಿಲ್ಲಿಸಿ ಅಭಿಮಾನಿಗಳ  ಅಭಿಮಾನ ಹಾಗೂ ಅವರ ಪ್ರೀತಿಯನ್ನು ಕಂಡು ಎಲ್ಲರಿಗೂ ಕೈಮುಗಿದು ಹಿಂದೂಪುರ ಕಡೆ ಹೊರಟರು.

ತೆಲುಗು ಪ್ರಭಾವ ವಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅದರಲ್ಲೂ ಎನ್.ಟಿ. ಆರ್. ಮತ್ತು ಅವರ ಕುಟುಂಬದವರೆಂದರೆ ಜಿಲ್ಲೆಯ ಜನತೆಗೆ ಬಹು ಅಭಿಮಾನ,ಮತ್ತು ಅವರ ಹೆಸರಿನಲ್ಲಿ ಈಗಲೂ ಜಿಲ್ಲೆಯಲ್ಲಿ ಅಭಿಮಾನಿ ಸಂಘಗಳು ಜೀವಂತವಾಗಿದ್ದು ಉತ್ತಮವಾದ ಸಾಮಾಜಿಕ ಕಾರ್ಯಗಳನ್ನು ನಿರ್ವಹಿಸುತ್ತಿವೆ.. ರಸ್ತೆ ಮಾರ್ಗವಾಗಿ ನಂದಮೂರಿ ಬಾಲಕೃಷ್ಣ  ಹಾದು ಹೋಗುವ ವಿಷಯ ತಿಳಿಯುತ್ತಿದ್ದಂತೆ  ಕ್ಷಣ ಮಾತ್ರದಲ್ಲಿ ಜನ ಸಾಗರವೇ ನೆರೆದಿದ್ದು ನಟನ ಬಗೆಗಿನ ಅಭಿಮಾನಕ್ಕೆ ಸಾಕ್ಷಿಯಾಗಿತ್ತು.

TRENDING