Wednesday, January 27, 2021
Home ರಾಜ್ಯ ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿ

ಇದೀಗ ಬಂದ ಸುದ್ದಿ

ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿ

ಬೆಂಗಳೂರು : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಕಾಲಕಾಲಕ್ಕೆ ಮಣ್ಣು, ಕೀಟ ರೋಗ, ನೀರು ಪರೀಕ್ಷೆ ಸೇರಿದಂತೆ ಇನ್ನಿತರ ತಾಂತ್ರಿಕ ನೆರವನ್ನು ಮನೆ ಬಾಗಿಲಿಗೇ ತಲುಪಿಸುವ ಮಹತ್ವದ ಕೃಷಿ ಸಂಜೀವಿನಿ ಹೆಸರಿನ ಸಂಚಾರಿ ಕೃಷಿ ವಾಹನಗಳು ನಾಳೆ ಲೋಕಾರ್ಪಣೆಗೊಳ್ಳಲಿವೆ.

ಸಿಎಂ ಬಿ.ಎಸ್. ಯಡಿಯೂರಪ್ಪ ನಾಳೆ ಬೆಳಗ್ಗೆ ವಿಧಾನಸೌಧದ ಮುಂಭಾಗದಲ್ಲಿ ಈ ವಾಹನಗಳನ್ನು ರೈತರಿಗೆ ಸಮರ್ಪಿಸಲಿದ್ದಾರೆ. ಚಿಕ್ಕ ಜಿಲ್ಲೆಗಳಿಗೆ ಒಂದು, ದೊಡ್ಡ ಜಿಲ್ಲೆಗಳಿಗೆ ಎರಡರಂತೆ ರಾಜ್ಯಾದ್ಯಂತ ಒಟ್ಟು 40 ಕೃಷಿ ಸಂಜೀವಿನಿ ವಾಹನಗಳು ರೈತರ ಸೇವೆಗೆ ಮುಕ್ತವಾಗಲಿದೆ.

ರೈತರು ಕೃಷಿ ಸಂಜೀವಿನಿ ಸಹಾಯವಾಣಿ 155313 ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿದರೆ, ಆಯಾ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಹೋಗುತ್ತದೆ. ಆಗ ರೈತರು ತಮ್ಮ ಸಮಸ್ಯೆ ತಿಳಿಸಿ ಪರಿಹಾರ ಪಡೆಯಬಹುದಾಗಿದೆ. ಈ ಸಹಾಯವಾಣಿ ಆರೋಗ್ಯ ಇಲಾಖೆಯ ಆಂಬುಲೆನ್ಸ್ ನಿರ್ವಹಣಾ ರೀತಿ ಕೆಲಸ ಮಾಡುತ್ತದೆ.

TRENDING