ರಾಮನಗರ: ರಾಮನಗರ ಜಿಲ್ಲೆ ಕನಕಪುರದಲ್ಲಿರುವ ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಶಕ್ತಿ ಬ್ಯಾಟರೀಸ್ ಕಂಪನಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ. ವೆಲ್ಡಿಂಗ್ ಮಾಡುವ ಸಂದರ್ಭದಲ್ಲಿ ಥರ್ಮಕೋಲಿಗೆ ಬೆಂಕಿಯ ಕಿಡಿ ಬಿದ್ದು ಅಲ್ಲಿಂದ ಬೆಂಕಿ ಕಾರ್ಖಾನೆಗೆ ವ್ಯಾಪಿಸಿದೆ. ಯುಪಿಎಸ್ ಹಾಗೂ ಇತರೆ ಪ್ರೊಡಕ್ಟ್ಗಳಿಗೆ ಅಲ್ಲಿ ಬ್ಯಾಟರೀಸ್ ತಯಾರಾಗುತ್ತಿತ್ತು. ಈ ಘಟನೆಯ ನಂತರ ವಿಷಯ ತಿಳಿದ ಅಗ್ನಿಶಾಮಕ ದಳದವರು 5 ವಾಹನಗಳ ಮೂಲಕ ಬೆಂಕಿಯನ್ನ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಅವಘಡದಿಂದಾಗಿ ಕಂಪನಿಯಲ್ಲಿದ್ದ ಬ್ಯಾಟರೀಸ್ ಗಳೆಲ್ಲವೂ ಸಂಪೂರ್ಣ ಭಸ್ಮವಾಗಿದೆ. ಆದರೆ ಈ ಸಮಯದಲ್ಲಿ ಕಾರ್ಖಾನೆಯಲ್ಲಿದ್ದ 50-60 ಜನ ಕಾರ್ಮಿಕರು ತಕ್ಷಣವೇ ಕಾರ್ಖಾನೆಯಿಂದ ಹೊರಬಂದು ಅಪಾಯದಿಂದ ಪಾರಾಗಿದ್ದಾರೆ. ಬೆಂಕಿ ಹಬ್ಬುತ್ತಿದ್ದ ಹಿನ್ನೆಲೆ ಕಾರ್ಖಾನೆಯ ಬಳಿ ಪ್ರವೇಶವನ್ನ ಸಂಪೂರ್ಣ ಬಂದ್ ಮಾಡಲಾಗಿತ್ತು. ಇದರ ಜೊತೆಗೆ ಕಾರ್ಖಾನೆಯಲ್ಲಿದ್ದ ಸಿಲಿಂಡರ್ಗಳು ಸಿಡಿಯುವ ಸಾಧ್ಯತೆ ಇದ್ದರಿಂದ ಮುನ್ನೆಚ್ಚರಿಕೆಯಾಗಿ ಕಂಪನಿಯ ಆವರಣವನ್ನ ಪೊಲೀಸರು ಬಂದ್ ಮಾಡಿದರು. ಬೆಂಕಿಯಿಂದಾಗಿ ಕಾರ್ಖಾನೆಯೊಳಗೆ 2 ಸಿಲಿಂಡರ್ ಸಿಡಿದಿದ್ದು, 6 ಸಿಲಿಂಡರ್ ಗಳನ್ನ ಅಗ್ನಿಶಾಮಕ ಸಿಬ್ಬಂದಿಗಳು ವಶಕ್ಕೆ ಪಡೆದರು. ಇದೇ ವೇಳೆ, ಈ ಕಾರ್ಖಾನೆ ನಾಗರಾಜ್ ಎಂಬುವರಿಗೆ ಸೇರಿದೆ ಎಂದು ತಿಳಿದುಬಂದಿದೆ. ಹುಲಕೋಟಿ ಗ್ರಾಮ ದೇಶಕ್ಕೆ ನಂಬರ್ ಒನ್; ಕೇಂದ್ರ ಸರ್ಕಾರದ ಅಂತ್ಯೋದಯ ಸಮೀಕ್ಷೆಯಲ್ಲಿ ನಂಬರ್ ಶ್ರೇಣಿ
ವೆಲ್ಡಿಂಗ್ ಹಾಗೂ ಥರ್ಮಕೋಲ್ನಿಂದ ನಡೆದ ಅವಘಡ:
ಕಾರ್ಖಾನೆಯಲ್ಲಿ ವೆಲ್ಡಿಂಗ್ ಮಾಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಥರ್ಮಕೋಲ್ಗೆ ಬೆಂಕಿಯ ಕಿಡಿ ತಗುಲಿದ ಪರಿಣಾಮ ಅದು ಇಡೀ ಕಂಪನಿಗೆ ವ್ಯಾಪಿಸಿದೆ. ಇದರ ಜೊತೆಗೆ ಕಾರ್ಖಾನೆಯಲ್ಲಿದ್ದ 8 ಗ್ಯಾಸ್ ಸಿಲಿಂಡರ್ ಗಳ ಪೈಕಿ 2 ಸಿಡಿದಿವೆ. ಉಳಿದವನ್ನ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಆದರೆ ಬೆಂಕಿಯ ರುದ್ರನರ್ತನ ಕಡಿಮೆ ಇದ್ದಾಗಲೇ ಕಾರ್ಮಿಕರು ಹೊರಗೆ ಬಂದಿದ್ದಾರೆ. ಇಲ್ಲಾಂದ್ರೆ ಅದೆಷ್ಟು ಜನ ಕಾರ್ಮಿಕರು ತಮ್ಮ ಪ್ರಾಣತ್ಯಾಗ ಮಾಡಬೇಕಿತ್ತೋ ಗೊತ್ತಿಲ್ಲ. ಇದು ಯಾರ ತಪ್ಪಿನಿಂದ ನಡೆಯಿತೋ, ಕಣ್ತಪ್ಪಿನಿಂದ ನಡೆಯಿತೋ ಗೊತ್ತಿಲ್ಲ.
ರಾಮನಗರದ ಶಕ್ತಿ ಅಕ್ಯುಮುಲೇಟರ್ಸ್ ಕಂಪನಿಯಲ್ಲಿ ಅಗ್ನಿ ಅವಘಡ
