Tuesday, January 19, 2021
Home ಅಂತರ್ ರಾಷ್ಟ್ರೀಯ ಕಾಶ್ಮೀರದಲ್ಲಿ ಹಿಮಮಳೆ: ಸಿಆರ್ ಪಿಎಫ್ ಯೋಧ, ಮಹಿಳೆ ಸಾವು!

ಇದೀಗ ಬಂದ ಸುದ್ದಿ

ಕಾಶ್ಮೀರದಲ್ಲಿ ಹಿಮಮಳೆ: ಸಿಆರ್ ಪಿಎಫ್ ಯೋಧ, ಮಹಿಳೆ ಸಾವು!

ಶ್ರೀನಗರಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮಮಳೆದಿಂದಾಗಿ ಓರ್ವ ಸಿಆರ್ ಪಿಎಫ್ ಮತ್ತು ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮಮಳೆಯಾಗಿದ್ದು, ಎರಡು ಪ್ರತ್ಯೇಕ ಘಟನೆಗಳಲ್ಲಿ ಓರ್ವ ಸಿಆರ್ ಪಿಎಫ್ ಸಿಬ್ಬಂದಿ ಮತ್ತು 4 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.

ನ್ಯಾಷನಲ್ ಕಾನ್ಫರೆನ್ಸ್ ನಾಯಕ ಮಹಮದ್ ಸಯ್ಯೀದ್ ಅಖೂನ್ ಅವರ ಮನೆಯಲ್ಲಿ ಕರ್ತವ್ಯ ನಿಯೋಜನೆಯಾಗಿದ್ದ ಸಿಆರ್ ಪಿಎಫ್ ನ 115 ಬೆಟಾಲಿಯನ್ ನ ಸಬ್ ಇನ್ಸ್ ಪೆಕ್ಟರ್ ಹೆಚ್ ಸಿ ಮುರ್ ಮುರ್ ಎಂಬುವವರು ಹಿಮಮಳೆಯಿಂದಾಗಿ ಸಾವನ್ನಪ್ಪಿದ್ದಾರೆ. ಮುರ್ ಮುರ್ ಅವರು ತಂಗಿದ್ದ ಗಾರ್ಡ್ ರೂಂ ಮೇಲೆ ಮಂಜು ಕುಸಿದಿದ್ದು, ಕೂಡಲೇ ಗಾರ್ಡ್ ರೂಮ್ ಕುಸಿದಿದೆ. ತೀವ್ರ ಗಾಯಗೊಂಡಿದ್ದ ಮುರ್ ಮುರ್ ಅವರನ್ನು SKIMS ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಕುಪ್ವಾರ ಜಿಲ್ಲೆಯಲ್ಲಿ ಸಂಭವಿಸಿದ ಹಿಮಪಾತದಲ್ಲಿ ರೇಷಂ ಬೇಗಂ ಎಂಬ ಹಿರಿಯ ಮಹಿಳೆ ಸಾವನ್ನಪ್ಪಿದ್ದಾರೆ. ಕಣಿವೆ ರಾಜ್ಯದಲ್ಲಿ ಹಿಮಮಳೆ ತೀವ್ರವಾಗಿದ್ದು, ಆಗಿಂದಾಗ್ಗೆ ಹಿಮಪಾತ ಸಂಭವಿಸುತ್ತಿದೆ. ಭಾನುವಾರದಿಂಚೀಗೆ ಕಾಶ್ಮೀರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಿಮಪಾವಾಗುತ್ತಿದ್ದು, ಹತ್ತಾರು ಕಟ್ಟಡಗಳು ಹಿಮಪಾತದಲ್ಲಿ ಕುಸಿದಿವೆ. ಸ್ಥಳೀಯ ಜಿಲ್ಲಾಡಳಿತ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

TRENDING