ಬೆಂಗಳೂರು : ನಾನು ಹೊನ್ನಾಳಿಯ ಅಂಜದ ಗಂಡು ಯಾರಿಗೂ ಹೆದರುವವನಲ್ಲ ಎಂದು ಶಾಸಕ ರೇಣುಕಾಚಾರ್ಯ ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಬಳಿಕ ಮಾತನಾಡಿದ ಶಾಸಕ ನಾನು ಮಧ್ಯ ಕರ್ನಾಟಕ ಭಾಗದವನು ಅಂತೆಯೆ ಉತ್ತರ ಕರ್ನಾಟಕ ಭಾಗದ ಶಾಸಕರನ್ನು ಗೌರವಿಸುತ್ತೇನೆ ಎಂದ ಅವರು ಯತ್ನಾಳ್ ಮಂತ್ರಿ ಆಗ್ಲಿಲ್ಲ ಎನ್ನುವ ಕಾರಣಕ್ಕೆ ಭ್ರಮನಿರಸನಗೊಂಡು ಹೀಗೆಲ್ಲಾ ಮಾತಾಡಬಹುದು, ಆದರೆ ಸಂಘಟನೆ ನಮಗೆ ತಾಯಿ ಸಮಾನ ಪಕ್ಷದ ಬಗ್ಗೆ, ನಾಯಕರ ಬಗ್ಗೆ ಹೇಳಿಕೆ ನೀಡುವಾಗ ಎಚ್ಚಿರಿಕೆಯಿಂದ ಇರಬೇಕು ಎಂದರು.
ಯಡಿಯೂರಪ್ಪ ನಮ್ಮ ಶಾಸಕಾಂಗ ಪಕ್ಷದ ನಾಯಕರು, ಶಾಸಕಾಂಗ ಪಕ್ಷದ ನಾಯಕರ ಬಗ್ಗೆ ಮಾತಾಡಬಾರದು ಹಾಗಂತ ನಾನು ಯಡಿಯೂರಪ್ಪರ ಪರ ಮಾತಾಡಲ್ಲ ನಾನು ಪಕ್ಷದ ಪರ ಮಾತಾಡ್ತೇನೆ ಎಂದ ಅವರು ಪಕ್ಷದ ವಿರುದ್ಧ ಮಾತನಾಡಿದರೆ ಪಕ್ಷಕ್ಕೆ ಒಳ್ಳೆಯದು ಅಲ್ಲ ಎಂದರು.