Tuesday, January 26, 2021
Home ಕೋವಿಡ್-19 ದೇಶದಲ್ಲಿ ರೂಪಾಂತರ ಕೊರೋನಾ ಸೋಂಕಿತರ ಸಂಖ್ಯೆ 71ಕ್ಕೆ ಏರಿಕೆ

ಇದೀಗ ಬಂದ ಸುದ್ದಿ

ದೇಶದಲ್ಲಿ ರೂಪಾಂತರ ಕೊರೋನಾ ಸೋಂಕಿತರ ಸಂಖ್ಯೆ 71ಕ್ಕೆ ಏರಿಕೆ

ನವದೆಹಲಿ: ದೇಶದಲ್ಲಿ ಹೊಸ ರೂಪಾಂತರ ಕೊರೊನಾ ಪ್ರಬೇಧದ ಸೋಂಕು ತಗುಲಿರುವ ಸಂಖ್ಯೆ ನಿಧಾನವಾಗಿ ಏರಿಕೆಯಾಗುತ್ತಿದ್ದು, ಇದೀಗ ಒಟ್ಟು 71 ಮಂದಿಗೆ ಸೋಂಕು ತಗುಲಿದ್ದು, ಅವರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ‘ಸೋಂಕಿತ ವ್ಯಕ್ತಿಗಳನ್ನು ಆಯಾ ರಾಜ್ಯ ಸರ್ಕಾರಗಳು ಗೊತ್ತುಪಡಿಸಿದ ಆರೋಗ್ಯ ಸೌಲಭ್ಯಗಳ ಕೊಠಡಿಯಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಸೋಂಕಿತರ ಜೊತೆ ಪ್ರಯಾಣ ಬೆಳೆಸಿದವರು, ಪ್ರಾಥಮಿಕ ಸಂಪರ್ಕಿತರ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ’ ಎಂದು ತಿಳಿಸಿದೆ.

ಡಿಸೆಂಬರ್​ 29ರಂದು ಬ್ರಿಟನ್​ನಿಂದ ಭಾರತಕ್ಕೆ ವಾಪಸ್​ ಆಗಿದ್ದ 6 ಮಂದಿಯಲ್ಲಿ ಕೊರೊನಾ ಹೊಸ ಪ್ರಬೇಧ ಪತ್ತೆಯಾಗಿತ್ತು. ಇದು ಶೇಕಡಾ 70 ರಷ್ಟು ವೇಗವಾಗಿ ಹರಡುತ್ತದೆ ಎಂದು ಈಗಾಗಲೇ WHO ವರದಿ ಮಾಡಿತ್ತು.

TRENDING