ಮುಂಬೈ, ಜ. 06: ಖ್ಯಾತ ಉದ್ಯಮಿ ರತನ್ ಟಾಟಾ ಅವರ ಕಾರಿನ ನಂಬರ್ನ್ನು ಯಾರೋ ದುರ್ಬಳಕೆ ಮಾಡಿಕೊಂಡ ಪರಿಣಾಮ ಸಂಚಾರಿ ನಿಯಮ ಉಲ್ಲಂಘಿಸಿದ್ದಾರೆ ಎಂದು ಪೊಲೀಸರು ರತನ್ ಟಾಟಾ ಅವರ ಕಚೇರಿಗೆ ನೋಟಿಸ್ ಕಳುಹಿಸಿದ್ದ ಘಟನೆ ನಡೆದಿದೆ.
ರತನ್ ಅವರ ಎಂಎಚ್ 01 ಡಿಕೆ 0111 ನಂಬರ್ನ ಕಾರು ಸಂಚಾರಿ ನಿಯಮ ಉಲ್ಲಂಘಿಸಿದೆ ಎಂದು ನೋಟಿಸ್ ನೀಡಿದ್ದರು, ಆದರೆ ಕಚೇರಿ ಸಿಬ್ಬಂದಿ ಆರೋಪವನ್ನು ತಳ್ಳಿ ಹಾಕಿ ರತನ್ ಅವರು ಅಂದು ಎಲ್ಲಿಯೂ ಹೋಗಿರಲಿಲ್ಲ ಎಂದು ಹೇಳಿದ್ದಾರೆ.
ಗೊಂದಲಕ್ಕೆ ಒಳಗಾದ ಪೊಲೀಸರು ತನಿಖೆ ಕೈಗೊಂಡು, ಸಿಸಿಟಿವಿ ಪೂಟೇಜ್ ನೋಡಿದಾಗ, ಮುಂಬೈನ ಮಾತುಂಗ ಫೈವ್ ಗಾರ್ಡನ್ ಪ್ರದೇಶದಿಂದ ಕಾರನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಮಹಿಳೆಯೊಬ್ಬರು ನಂಬರ್ ಪ್ಲೇಟ್ ಬದಲಿಸಿದ್ದಾರೆ ಎಂದು ತಿಳಿದುಬಂದಿದೆ. ಮಹಿಳೆಗಾಗಿ ಹುಡುಕಾಟ ನಡೆಸಿದ್ದಾರೆ.
ಅನಾರೋಗ್ಯಕ್ಕೀಡಾದ ಮಾಜಿ ಉದ್ಯೋಗಿಯ ಆರೋಗ್ಯ ವಿಚಾರಿಸುವುದಕ್ಕಾಗಿ ಕೈಗಾರಿಕೋದ್ಯಮಿ ರತನ್ ಟಾಟಾ ಮುಂಬೈ ನಿಂದ ಪುಣೆಗೆ ತೆರಳಿದ್ದು, ಅವರ ನಡೆಗೆ ದೇಶಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗತೊಡಗಿದೆ.
ಯೋಗೇಶ್ ದೇಸಾಯಿ ಎಂಬುವವರು ಲಿಂಕ್ಡ್ ಇನ್ ನಲ್ಲಿ ಈ ಘಟನೆಯನ್ನು ಹಂಚಿಕೊಂಡಿದ್ದು, ಈ ಘಟನೆ ವೈರಲ್ ಆಗತೊಡಗಿದೆ.
ಕಳೆದ 2 ವರ್ಷಗಳಿಂದ ಉದ್ಯೋಗಿಗೆ ಆರೋಗ್ಯ ಸರಿ ಇಲ್ಲ ಎಂಬ ಮಾಹಿತಿ ರತನ್ ಟಾಟಾಗೆ ತಲುಪಿದ್ದು, ತಕ್ಷಣವೇ ಉದ್ಯೋಗಿ ವಾಸಿಸುತ್ತಿದ್ದ ಪುಣೆಯಲ್ಲಿರುವ ಫ್ರೆಂಡ್ಸ್ ಸೊಸೈಟಿಗೆ ಭೇಟಿ ನೀಡಿ ಉದ್ಯೋಗಿಯ ಆರೋಗ್ಯ ವಿಚಾರಿಸಿದ್ದಾರೆ.
ಯೋಗೀಶ್ ಅವರು ರತನ್ ಟಾಟಾ ಉದ್ಯೋಗಿಯೊಂದಿಗೆ ಮಾತನಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಇಂಟರ್ ನೆಟ್ ನಲ್ಲಿ ವೈರಲ್ ಆಗತೊಡಗಿದ್ದು ರತನ್ ಟಾಟಾ ಅವರ ನಡೆಯ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗತೊಡಗಿದೆ.