Tuesday, January 26, 2021
Home ಅಂತರ್ ರಾಷ್ಟ್ರೀಯ ರೈತ ರಾಷ್ಟ್ರ ವಿರೋಧಿಗಳಲ್ಲ, ಕೆಲವರು ಅವರನ್ನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ: ಬಾಬಾ ರಾಮದೇವ್

ಇದೀಗ ಬಂದ ಸುದ್ದಿ

ರೈತ ರಾಷ್ಟ್ರ ವಿರೋಧಿಗಳಲ್ಲ, ಕೆಲವರು ಅವರನ್ನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ: ಬಾಬಾ ರಾಮದೇವ್

 ಡೆಹ್ರಾಡೂನ್: ದೇಶದಲ್ಲಿ ಒಬ್ಬರೇ ಒಬ್ಬ ರೈತ ಕೂಡ ರಾಷ್ಟ್ರ ವಿರೋಧಿಯಲ್ಲ, ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅವರನ್ನು ದುರುಪಯೋಗ ಪಡಿಸಿಕೊಳ್ಳುತ್ತಿವೆ ಎಂದು ಯೋಗಗುರು ಬಾಬಾ ರಾಮದೇವ್ ಹೇಳಿದ್ದಾರೆ.

ಈ ದೇಶದಲ್ಲಿ ಒಬ್ಬ ರೈತ ರಾಷ್ಟ್ರ ವಿರೋಧಿಯಿಲ್ಲ, ಆದರೆ ಕೆಲವರು ಅದನ್ನು ಬಳಸಿಕೊಳ್ಳುತ್ತಿದ್ದಾರೆ, ಇಂತಹುದನ್ನು ನಡೆಯದಂತೆ ನಾವು ತಡೆಯಬೇಕು ಎಂದು ಬಾಬಾ ಕರೆ ನೀಡಿದ್ದಾರೆ.

ಚಳಿ ತೀರಾ ಉತ್ತುಂಗದಲ್ಲಿರುವ ಸಮಯದಲ್ಲೇ ರೈತರು ಪ್ರತಿಭಟನೆ ನಡೆಸುತ್ತಿರುವುದು ಆತಂಕದ ಸಂಗತಿಯಾಗಿದೆ. ಸರ್ಕಾರ ಈಗಾಗಲೇ ರೈತರ ಬಗ್ಗೆ ಕಾಳಜಿ ವಹಿಸಿದೆ. ಮತ್ತು ಅವರ ಸಮಸ್ಯೆಗಳನ್ನು ಸರಿಪಡಿಸುವ ಭರವಸೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ರೈತರ ವಿರುದ್ಧ ಯಾವುದೇ ದ್ವೇಷವಿಲ್ಲ, ಅವರು (ಮೋದಿ) ದೇಶದ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಮತ್ತು ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ ಮೊದಲ ಪ್ರಧಾನಿಯಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೈಯ್ಯಲು ವಿರೋಧ ಪಕ್ಷಗಳಿಗೆ ಯಾವುದೇ ವಿಷಯವಿಲ್ಲದ ಕಾರಣ ಕೊರೋನಾ ಲಸಿಕೆ ವಿಷಯದಲ್ಲಿ ಅವರನ್ನು ಎಳೆದು ತರುತ್ತಿದ್ದಾರೆ ಎಂದು ರಾಮದೇವ್ ಆರೋಪಿಸಿದ್ದಾರೆ.

TRENDING