Saturday, January 23, 2021
Home ಜಿಲ್ಲೆ ಕಲಬುರ್ಗಿ ಕಲಬುರಗಿ ಕೇಂದ್ರ ಕಾರಾಗೃಹದಿಂದ ಕೈದಿ ಪರಾರಿ

ಇದೀಗ ಬಂದ ಸುದ್ದಿ

ಕಲಬುರಗಿ ಕೇಂದ್ರ ಕಾರಾಗೃಹದಿಂದ ಕೈದಿ ಪರಾರಿ

ಕಲಬುರಗಿ: ಜೈಲು ಸಿಬ್ಬಂದಿಯನ್ನು ಯಾಮಾರಿಸಿ ಕೈದಿಯೊಬ್ಬ ಕಲಬುರಗಿ ಕೇಂದ್ರ ಕಾರಾಗೃಹದಿಂದ ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ  ನಡೆದಿದೆ.

ಪರಾರಿಯಾಗಿರುವ ಕೈದಿಯನ್ನು ರಮೇಶ್ ವಡ್ಡರ್(30) ಎಂದು ಗುರುತಿಸಲಾಗಿದೆ. ಕೈದಿಗಳನ್ನು ಜೈಲಿನ ಹೊರಗಡೆ ಕೃಷಿ ಕೆಲಸಕ್ಕೆ ಕಳುಹಿಸಲಾಗಿತ್ತು. ತೊಗರಿ ರಾಶಿ ಮಾಡಲು ಮುಂಜಾನೆ ಜೈಲು ಸಿಬ್ಬಂದಿ ಕೈದಿಗಳನ್ನು ಕಳುಹಿಸಿದ್ದರು. ಈ ವೇಳೆ ಬಹಿರ್ದೆಸೆಗೆ ಹೋಗುವುದಾಗಿ ಹೇಳಿ ಕೈದಿ ರಮೇಶ್ ಪರಾರಿಯಾಗಿದ್ದಾನೆ.

ರಮೇಶ್, ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಲಿಂಗದಳ್ಳಿ‌ ಗ್ರಾಮದ ನಿವಾಸಿಯಾಗಿದ್ದು, ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ಸದ್ಯ ಪರಾರಿಯಾಗಿರುವ ಕೈದಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TRENDING