ಎಸ್ ಎಸ್ ಎಲ್ ಸಿ ಪಾಸಾದವರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದ್ದು, ಗ್ರಾಮೀಣ ಅಂಚೆ ನೌಕರರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಅಂಚೆ ವೃತ್ತವು ರಾಜ್ಯದಲ್ಲಿ ಖಾಲಿಯಿರುವ ಗ್ರಾಮೀಣ ಅಂಚೆ ನೌಕರರ 2,443 ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು https://appost.in/gdsonline ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಪೋಸ್ಟ್ ಮಾಸ್ಟರ್ ಜನರಲ್ ಬೆಂಗಳೂರು ಮುಖ್ಯ ಕಾರ್ಯಾಲಯ ದೂ.ಸಂ: 080-22392599, ಪೋಸ್ಟ್ ಮಾಸ್ಟರ್ ಜನರಲ್ ದಕ್ಷಿಣ ಕರ್ನಾಟಕ ವಲಯ ದೂ.ಸಂ: 9481455606, ಪೋಸ್ಟ್ ಮಾಸ್ಟರ್ ಜನರಲ್ ಉತ್ತರ ಕರ್ನಾಟಕ ವಲಯ ದೂ.ಸಂ: 0836-2740454, ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕರ್ನಾಟಕ ವೃತ್ತ ದೂ.ಸಂ: 080-22392544 ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.