Saturday, January 16, 2021
Home ಜಿಲ್ಲೆ ರಾಮನಗರ ರಾಮನಗರದಲ್ಲಿ ಹೊತ್ತಿ ಉರಿದ ಬ್ಯಾಟರಿ ತಯಾರಿಕಾ ಕಾರ್ಖನೆ

ಇದೀಗ ಬಂದ ಸುದ್ದಿ

ರಾಮನಗರದಲ್ಲಿ ಹೊತ್ತಿ ಉರಿದ ಬ್ಯಾಟರಿ ತಯಾರಿಕಾ ಕಾರ್ಖನೆ

ರಾಮನಗರ, ಜ.05: ಆಕಸ್ಮಿಕವಾಗಿ ಬ್ಯಾಟರಿ ತಯಾರಿಕಾ ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ಶಾಮಕದಳದ ಸಿಬ್ಬಂದಿಗಳು ಬೆಂಕಿಯನ್ನು ಹತೋಟಿಗೆ ತರಲು ಪ್ರಯತ್ನವನ್ನು ನಡೆಸುತ್ತಿದ್ದಾರೆ.

ಮಂಗಳವಾರ ರಾಮನಗರ ಜಿಲ್ಲೆಯ ಹಾರೋಹಳ್ಳಿ ಕೈಗಾರಿಕಾ ವಲಯದಲ್ಲಿರುವ ಶಕ್ತಿ ಬ್ಯಾಟರೀಸ್ ಕಾರ್ಖಾನೆ ಬೆಂಕಿಗಾಹುತಿಯಾಗಿದೆ. ತಯಾರಿಕಾ ಘಟಕದ ಥರ್ಮಕೋಲಿನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಕಾರ್ಖಾನೆಗೆ ಹಬ್ಬಿದೆ.

ಕಾರ್ಖಾನೆಯ ಒಳಗೆ ಬೆಂಕಿ ಕಾಣಿಸಿಕೊಂಡ ತಕ್ಷಣ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ಇದರಿಂದ ಆತಂಕಗೊಂಡ ಕಾರ್ಮಿಕರು ತಕ್ಷಣವೇ ಹೊರಗೆ ಓಡಿ ಹೋಗಿದ್ದಾರೆ. ಇದರಿಂದಾಗಿ ಯಾರಿಗೂ ಅಪಾಯವಾಗಿಲ್ಲ.

ಕ್ಷಣ-ಕ್ಷಣಕ್ಕೂ ಬೆಂಕಿ ಹೆಚ್ಚಾಗಿ ವ್ಯಾಪಿಸುತ್ತಿದೆ. ಶಕ್ತಿ ಬ್ಯಾಟರೀಸ್ ಕಂಪನಿಯ ಸುತ್ತಲೂ ದಟ್ಟವಾದ ಹೊಗೆ ಅವರಿಸಿದೆ. ಅಕ್ಕ ಪಕ್ಕದಲ್ಲಿ ಹಲವಾರು ಕಾರ್ಖಾನೆಗಳಿದ್ದು, ಅವುಗಳಿಗು ಬೆಂಕಿ ವ್ಯಾಪಿಸುವ ಆತಂಕ ಎದುರಾಗಿದೆ.

ಸ್ಥಳಕ್ಕೆ ಧಾವಿಸಿರುವ ಅಗ್ನಿಶಾಮಕದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಪ್ರಯತ್ನವನ್ನು ಪಡುತ್ತಿದ್ದಾರೆ. ಕತ್ತಲೆ ಮತ್ತು ದಟ್ಟವಾದ ಹೊಗೆ ಕಾರ್ಯಚರಣೆಗೆ ಅಡ್ಡಿ ಮಾಡಿದೆ. ಕಾರ್ಖಾನೆಯ ಸ್ಥಿತಿ ಕಂಡು ಮಾಲೀಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

TRENDING