Monday, January 25, 2021
Home ಸುದ್ದಿ ಜಾಲ ಧ್ವಂಸ ಮಾಡಿದ ಹಿಂದೂ ದೇವಾಲಯ ಪುನರ್ ನಿರ್ಮಾಣಕ್ಕೆ ಪಾಕ್ ಸುಪ್ರೀಂ ಕೋರ್ಟ್ ಆದೇಶ

ಇದೀಗ ಬಂದ ಸುದ್ದಿ

ಧ್ವಂಸ ಮಾಡಿದ ಹಿಂದೂ ದೇವಾಲಯ ಪುನರ್ ನಿರ್ಮಾಣಕ್ಕೆ ಪಾಕ್ ಸುಪ್ರೀಂ ಕೋರ್ಟ್ ಆದೇಶ

 ಇಸ್ಲಾಮಾಬಾದ್ಕಳೆದ ವಾರ ಖೈಬರ್ ಪಂಖ್ತುಂಕ್ವಾ ಪ್ರಾಂತ್ಯದಲ್ಲಿ ಉದ್ರಿಕ್ತ ಗುಂಪೊಂದು ಬೆಂಕಿ ಹಚ್ಚಿ ಧ್ವಂಸಗೊಳಿಸಿದ ಶತಮಾನ ಇತಿಹಾಸವುಳ್ಳ ಹಿಂದೂ ದೇವಾಲಯವನ್ನು ಇವಾಕ್ಯೂ ಪ್ರಾಪರ್ಟಿ ಟ್ರಸ್ಟ್ ಬೋರ್ಡ್ (ಇಪಿಟಿಬಿ) ಪುನರ್ ನಿರ್ಮಾಣ ಮಾಡಬೇಕೆಂದು ಪಾಕಿಸ್ತಾನ ಸುಪ್ರೀಂಕೋರ್ಟ್ ಮಂಗಳವಾರ ಆದೇಶ ನೀಡಿದೆ. ದೇವಾಲಯ ಮೇಲಿನ ದಾಳಿ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಮುಜುಗರವನ್ನುಂಟುಮಾಡಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ದಾಳಿಯನ್ನು ಗಮಸಿದ್ದ ನ್ಯಾಯಾಲಯ, ಜನವರಿ 5ರೊಳಗೆ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸ್ಥಳೀಯ ಪ್ರಾಧಿಕಾರಕ್ಕೆ ಆದೇಶಿಸಿತ್ತು. ಅಲ್ಲದೇ, ಪಾಕಿಸ್ತಾನದಾದ್ಯಂತ ಕಾರ್ಯನಿರ್ವಹಿಸುವ, ಕಾರ್ಯನಿರ್ವಹಿಸದ ದೇವಾಲಯಗಳು ಮತ್ತು ಗುರುದ್ವಾರಗಳ ಬಗ್ಗೆ ಮಾಹಿತಿ ಸಲ್ಲಿಸುವಂತೆ ಬೋರ್ಡ್ ಗೆ ನಿರ್ದೇಶನ ನೀಡಿತ್ತು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಮತಾಂಧ ಜಮೈತ್ ಉಲೇಮಾ-ಇ- ಇಸ್ಲಾಂ ಪಾರ್ಟಿಯ ಸದಸ್ಯರು ಬುಧವಾರ ಕಾರಕ್ ಜಿಲ್ಲೆಯ ಖೈಬರ್ ಪಂಖ್ತುಂಕ್ವಾ ಪ್ರಾಂತ್ಯದಲ್ಲಿನ ತೆರಿ ಹಳ್ಳಿಯಲ್ಲಿದ್ದ ಹಿಂದೂ ದೇವಾಲಯದ ಮೇಲೆ ಮಾಡಿದ್ದ ದಾಳಿಯನ್ನು ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮುಖಂಡರು ತೀವ್ರವಾಗಿ ಖಂಡಿಸಿದ್ದರು.

ದೇಶಾದ್ಯಂತ ದೇವಾಲಯಗಳ ತೆರವು ಹಾಗೂ ತೆರವು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮುಖ್ಯ ನ್ಯಾಯಾಧೀಶ ಗುಲ್ಜಾರ್ ಅಹ್ಮದ್ ಅವರನ್ನೊಳಗೊಂಡ ಮೂವರು ಸದಸ್ಯರ ಪೀಠ ಇಂದು ನಡೆದ ವಿಚಾರಣೆ ವೇಳೆಯಲ್ಲಿ ಇಪಿಟಿಬಿಗೆ ನಿರ್ದೇಶನ ನೀಡಿತು.

ಭಾರತದಿಂದ ವಲಸೆ ಬಂದಿರುವ ಹಿಂದೂಗಳು ಮತ್ತು ಸಿಖ್ಖರ ಧಾರ್ಮಿಕ ಸ್ಥಳಗಳು ಮತ್ತು ಆಸ್ತಿ ಪಾಸ್ತಿ ನಿರ್ವಹಣೆ ಹೊಣೆಯನ್ನು ಇಪಿಟಿಬಿ ನಿರ್ವಹಿಸುತ್ತಿದೆ.

TRENDING