ಚಿನ್ನಾಭರಣ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದ್ದು, ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಭಾರೀ ಏರಿಕೆ ಕಂಡು ಬಂದಿದೆ.

ಹೌದು, ದೆಹಲಿಯಲ್ಲಿ 47,742 ರೂಪಾಯಿ ಇದ್ದ ಚಿನ್ನದ ದರ ಸೋಮವಾರ 877 ರೂಪಾಯಿ ಏರಿಕೆಯಾಗಿದೆ. ಇದೀಗ 10 ಗ್ರಾಂ ಚಿನ್ನದ ದರ 50,619 ರೂಪಾಯಿಯಾಗಿದೆ. ಇನ್ನೂ ಬೆಳ್ಳಿ ದರದಲ್ಲೂ ಕೂಡ ಏರಿಕೆ ಕಂಡಿದ್ದು, ಒಂದು ಕೆಜಿ ಬೆಳ್ಳಿ ದರದಲ್ಲಿ ಬರೋಬ್ಬರಿ 2,012 ರೂಪಾಯಿ ಹೆಚ್ಚಳವಾಗಿದೆ. ಇದರಿಂದ ಬೆಳ್ಳಿಯ ಬೆಲೆ 67,442 ರೂಪಾಯಿಯಿಂದ 69,554 ರೂಪಾಯಿಗೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿ ದರ..?

ಬೆಂಗಳೂರಿನಲ್ಲಿ ಅಪರಂಚಿ ಚಿನ್ನದ ದರ 10 ಗ್ರಾಂಗೆ 51,250 ರೂಪಾಯಿಷ್ಟಿದ್ದರೆ, ಆಭರಣ ಚಿನ್ನದ ದರ ಗ್ರಾಂಗೆ 4,780 ರೂಪಾಯಿಯಾಗಿದೆ. ಇನ್ನೂ ಬೆಳ್ಳಿ ದರ ಕೆಜಿಗೆ 69,700 ರೂಗೆ ಏರಿಕೆಯಾಗಿದೆ.