Wednesday, January 27, 2021
Home ಕೋವಿಡ್-19 ಕೋವಿಡ್ ಲಸಿಕೆ ಪಡೆದುಕೊಂಡಿದ್ದ ನರ್ಸ್ ಸಾವು

ಇದೀಗ ಬಂದ ಸುದ್ದಿ

ಕೋವಿಡ್ ಲಸಿಕೆ ಪಡೆದುಕೊಂಡಿದ್ದ ನರ್ಸ್ ಸಾವು

ಸಾಮಾನ್ಯವಾಗಿ ಪ್ರತಿಶತ ನೂರರಷ್ಟು ಪರಿಣಾಮಕಾರಿ ಲಸಿಕೆ ಅಭಿವೃದ್ಧಿಪಡಿಸಲು ಸಾಮಾನ್ಯವಾಗಿ ಎರಡು ಮೂರು ವರ್ಷಗಳು ಬೇಕಾಗುತ್ತದೆ. ಆದರೆ, ಕೊರೊನಾ ವೈರಸ್ ಲಸಿಕೆ ವಿಷಯದಲ್ಲಿ, ಸರ್ಕಾರಗಳು ಕೆಲ ನಿಬಂಧನೆಗಳನ್ನು ಸಡಿಲಿಸಿ, ಸಮರೋಪಾದಿ ಲಸಿಕೆ ಬಳಸಲು ಅನುಮತಿಸುತ್ತಿವೆ. ಈವರೆಗೆ ಜಗತ್ತಿನಾದ್ಯಂತ ಮೂರು ಲಸಿಕೆಗಳನ್ನು ತುರ್ತು ಬಳಕೆಗಾಗಿ ಅನುಮೋದಿಸಲಾಗಿದೆ.

ಭಾರತದಲ್ಲಿ ಭಾರತ್ ಬಯೋಟೆಕ್ ಕೊರೋನಾ ಲಸಿಕೆ ತುರ್ತು ಬಳಕೆಗೆ ಡಿಜಿಸಿಐ ಅನುಮೋದನೆ ನೀಡಿದೆ. ಆದರೆ ಲಸಿಕೆಗಳ ಪರಿಣಾಮಕಾರಿತ್ವದ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಸಂದೇಹಗಳಿವೆ. ಈ ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸುವಂತಹ ಘಟನೆ ಪೋರ್ಚುಗಲ್‌ನಲ್ಲಿ ನಡೆದಿದೆ.

ನರ್ಸ್ ವೊಬ್ಬರು ಫೈಝರ್ ಲಸಿಕೆ ತೆಗೆದುಕೊಂಡು ಎರಡು ದಿನಗಳ ನಂತರ ಮೃತಪಟ್ಟಿದ್ದಾರೆ. ಪ್ರಸ್ತುತ ಈ ಘಟನೆ ಜಗತ್ತಿನಾದ್ಯಂತ ತೀವ್ರ ಚರ್ಚೆಯಾಗುವ ಜೊತೆಗೆ, ಲಸಿಕೆಯ ಕಾರ್ಯಕ್ಷಮತೆ ಬಗ್ಗೆ ಮತ್ತಷ್ಟು ಅನುಮಾನ, ಆತಂಕಗಳನ್ನು ಹುಟ್ಟುಹಾಕಿದೆ.

ಸೋನಿಯಾ ಅಜೆವೆಡೊ(41) ಎಂಬ ಮಹಿಳೆ ಪೋರ್ಟೊದಲ್ಲಿರುವ ಪೋರ್ಚುಗೀಸ್ ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿಯಲ್ಲಿ ಮಕ್ಕಳ ಸಹಾಯಕ ದಾದಿಯಾಗಿ ಕೆಲಸ ಮಾಡುತ್ತಿದ್ದಾರೆ. ಫೈಝರ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೋವಿಡ್ ಲಸಿಕೆಯನ್ನು ತುರ್ತು ಬಳಕೆಯ ಭಾಗವಾಗಿ ಆಕೆ ಲಸಿಕೆಯನ್ನು ತೆಗೆದುಕೊಂಡಿದ್ದು, ಎರಡು ದಿನಗಳ ನಂತರ ಆಕೆ ತೀರಿಕೊಂಡಿದ್ದಾರೆ.

ಈ ಕುರಿತು ಸೋನಿಯಾ ತಂದೆ ಅಬಿಲಿಯೊ ಅಜೆವೆಡೊ, “ನನ್ನ ಮಗಳಿಗೆ ಯಾವುದೇ ಆರೋಗ್ಯ ಸಮಸ್ಯೆಗಳಿರಲಿಲ್ಲ ಎರಡು ದಿನಗಳ ಹಿಂದೆ ಆಕೆ ಕೊರೋನಾ ವೈರಸ್ ಲಸಿಕೆ ತೆಗೆದುಕೊಂಡಿದ್ದಳು. ಆದರೆ ಆಕೆಗೆ ಕೊರೋನಾ ಸೋಂಕಿನ ಲಕ್ಷಣಗಳಿರಲಿಲ್ಲ. ಲಸಿಕೆ ತೆಗೆದುಕೊಂಡ ನಂತರ ಯಾವುದೇ ಅಡ್ಡಪರಿಣಾಮಗಳು ಕಂಡುಬಂದಿರಲಿಲ್ಲ, ಆದರೆ ಲಸಿಕೆ ಹಾಕಿಸಿಕೊಂಡ ಎರಡು ದಿನಗಳಲ್ಲಿ ಅನಿರೀಕ್ಷಿತವಾಗಿ ಮೃತಪಟ್ಟಿದ್ದಾಳೆ. ನನ್ನ ಮಗಳು ಏಕೆ ಮೃತಪಟ್ಟಳು ಎಂಬುದು ಗೊತ್ತಾಗಬೇಕಿದೆ. ಅಷ್ಟು ಮಾತ್ರವಲ್ಲದೆ, ‘ ಸೋನಿಯಾ ಮದ್ಯದ ಚಟಕ್ಕೆ ಒಳಗಾಗಲಿಲ್ಲ ಮತ್ತು ಯಾವುದೇ ಹೊಸ ಆಹಾರ ತೆಗೆದುಕೊಂಡಿರಲಿಲ್ಲ ಎಂದು ಆಕೆಯ ತಂದೆ ಹೇಳಿದ್ದಾರೆ.

ಸೋನಿಯಾ ಸಾವಿನ ಕಾರಣ ಪತ್ತೆ ಹಚ್ಚಲು ಪೋರ್ಚುಗೀಸ್ ಆರೋಗ್ಯ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಪೋರ್ಚುಗಲ್‌ನಲ್ಲಿ 538 ಆರೋಗ್ಯ ಕಾರ್ಯಕರ್ತರಿಗೆ ಫೈಝರ್ ಲಸಿಕೆ ನೀಡಲಾಗಿದೆ. ಹತ್ತು ದಶಲಕ್ಷ ಜನಸಂಖ್ಯೆ ಹೊಂದಿರುವ ಪೋರ್ಚುಗಲ್‌ನಲ್ಲಿ 4,27,000 ಕೊರೋನಾ ಪ್ರಕರಣಗಳು ದಾಖಲಾಗಿದ್ದು, 7,118 ಮಂದಿ ಸಾವನ್ನಪ್ಪಿದ್ದಾರೆ.

TRENDING