ಹೊಸ ವರ್ಷಕ್ಕೆ ಭಾರತೀಯ ಜನತೆಗೆ ಕೊರೊನಾ ಲಸಿಕೆ ಗಿಫ್ಟ್ ನೀಡಿದ್ದ ಕೇಂದ್ರ ಸರ್ಕಾರ ಇದೀಗ ಕೊರೊನಾ ಲಸಿಕೆ ವಿತರಣೆ ದಿನಾಂಕವನ್ನೂ ಘೋಷಣೆ ಮಾಡುವ ಮೂಲಕ ಸಂಕ್ರಾಂತಿ ಹಬ್ಬದ ಗಿಫ್ಟ್ ನೀಡಿದೆ.
ಸಂಕ್ರಾಂತಿ ಹಬ್ಬದ ಮುನ್ನಾದಿನ ಅಂದರೆ ಜನವರಿ 13ರಿಂದಲೇ ಕೊರೊನಾ ಲಸಿಕೆಯನ್ನ ದೇಶದಲ್ಲಿ ವಿತರಣೆ ಮಾಡಲಾಗುವುದು ಅಂತಾ ಕೇಂದ್ರ ಆರೋಗ್ಯ ಸಚಿವಾಲಯ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದೆ.
ದೇಶದಲ್ಲಿ ಕೊರೊನಾ ಲಸಿಕೆ ಆದ್ಯತೆಯ ಆಧಾರದ ಮೇಲೆ ಸಿಗಲಿದೆ. ಮೊದಲ ಆದ್ಯತೆಯ ವಿಭಾಗದಲ್ಲಿ ಆರೋಗ್ಯ ಕಾರ್ಯಕರ್ತರಿದ್ದು, ಇವರಿಗೆ ಜನವರಿ 13ರಿಂದ ಕೊರೊನಾ ಲಸಿಕೆ ಸಿಗಲಿದೆ.
ಶೀಘ್ರದಲ್ಲೇ ಸೀರಮ್ ಇನ್ಸಿಟ್ಯೂಟ್ 6.5 ಕೋಟಿ ಕೊರೊನಾ ಡೋಸ್ಗಳನ್ನ ಹಸ್ತಾಂತರಿಸಲಿದೆ. ಹಂತ ಹಂತವಾಗಿ ಪ್ರತಿಯೊಬ್ಬರಿಗೂ ದೇಶದಲ್ಲಿ ಕೊರೊನಾ ಲಸಿಕೆ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.