ಚಿಕ್ಕಮಗಳೂರು : ಮದುವೆ ಹಿಂದಿನ ದಿನದ ಕಾರ್ಯಕ್ರಮದಲ್ಲಿ ಲವಲವಿಕೆಯಿಂದ ಭಾಗಿಯಾಗಿದ್ದ ವರ, ಮದುವೆ ದಿನ ಎಸ್ಕೇಪ್ ಆದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ದೋರನಾಳು ಗ್ರಾಮದಲ್ಲಿ ನಡೆದಿದ್ದು. ವಧುವಿಗೆ ಕಲ್ಯಾಣ ಮಂಟಪದಲ್ಲಿಯೇ ಮತ್ತೋರ್ವ ಯುವಕ ತಾಳಿ ಕಟ್ಟಿದ ಅಪರೂಪದ ಘಟನೆ ಸಿನಿಮಾ ಸ್ಟೈಲ್ ನಲ್ಲಿ ದೋರನಾಳು ಗ್ರಾಮದಲ್ಲಿ ನಡೆದಿದೆ.
ಹಿಂದಿನ ದಿನ ಇದ್ದ ನವೀನ್ ಮುಹೂರ್ತದ ವೇಳೆಯಲ್ಲಿ ನಾಪತ್ತೆಯಾಗಿದ್ದಾನೆ. ಮಧುಮಗಳಾಗಿ ನಿಂತಿದ್ದ ಯುವತಿಯನ್ನ ಬೆಂಗಳೂರಿನ ಬಿಎಂಟಿಸಿ ಬಸ್ ಕಂಡಕ್ಟರ್ ಕೈ ಹಿಡಿದಿದ್ದಾರೆ. ಶನಿವಾರ ರಾತ್ರಿ ಸಿಂಧು ಜೊತೆ ರಿಸೆಪ್ಷನ್ನಲ್ಲಿದ್ದ ನವೀನ್ ಭಾನುವಾರ ಬೆಳಗ್ಗೆ ನಾಪತ್ತೆಯಾಗಿದ್ದ. ನವೀನ್ ಪ್ರೀತಿಸುತ್ತಿದ್ದ ಯುವತಿ ನನ್ನನ್ನ ಪ್ರೀತಿಸಿ ಬೇರೆ ಹುಡುಗಿಯನ್ನ ಮದುವೆಯಾಗಲು ಬಿಡಲ್ಲ. ನಾನು ಛತ್ರದಲ್ಲೇ ವಿಷ ಕುಡಿಯುತ್ತೇನೆ, ಮದುವೆ ನಿಲ್ಲಿಸುತ್ತೇನೆ ಎಂದು ಹೆದರಿಸಿದ್ದಕ್ಕೆ ವರ ನವೀನ್ ಮರ್ಯಾದೆಗೆ ಹೆದರಿ ಛತ್ರದಿಂದಲೇ ನಾಪತ್ತೆಯಾಗಿ ಪ್ರೀತಿಸುತ್ತಿದ್ದ ಯುವತಿಗೆ ತುಮಕೂರಿಗೆ ಬರಲು ಹೇಳಿದ್ದ. ಆ ಹೊತ್ತಿಗೆ ಮದುವೆ ನಿಂತಿತ್ತು. ಆಗ ದೋರನಾಳು ಗ್ರಾಮದ ಪಕ್ಕದ ನಂದಿ ಗ್ರಾಮದ ಯುವಕ ಚಂದ್ರು ಮಧುಮಗಳಾಗಿ ನಿಂತಿದ್ದ ಸಿಂಧು ಕೈಹಿಡಿದಿದ್ದಾನೆ.
ಚಂದ್ರು ಬೆಂಗಳೂರಿನ ಬಿಎಂಟಿಸಿ ಬಸ್ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಾನೆ. ನಾಪತ್ತೆಯಾದ ಯುವಕನನ್ನ ಪೋಷಕರು ಹುಡುಕಾಟ ನಡೆಸಿದರೂ ಸಿಕ್ಕಿಲ್ಲ. ಪ್ರೀತಿಸಿದ ಯುವತಿಗೆ ನವೀನ್ ತುಮಕೂರಿಗೆ ಬಾ ಎಂದಿದ್ದರಿಂದ ಅಲ್ಲಿಗೆ ಹೋಗಿ ನೋಡಿದರೂ ಆತ ಸಿಕ್ಕಿಲ್ಲ.
ಆದರೇ, ಹಸೆಮಣೆ ಏರಬೇಕಿದ್ದ ಯುವತಿಗೆ ಮದುವೆ ನಿಲ್ಲುವ ಆತಂಕ ಎದುರಾಗಿತ್ತು. ಆದರೇ, ಮದುವೆ ನಿಲ್ಲದೆ ಛತ್ರದಲ್ಲೇ ಮತ್ತೋರ್ವ ಯುವಕ ಚಂದ್ರು ನಾನೇ ಮದುವೆಯಾಗುತ್ತೇನೆಂದು ವಿವಾಹವಾಗಿದ್ದಾನೆ. ಹೊಸ ಬದುಕಿನ ಆಸೆ ಹೊತ್ತಿದ್ದ ವಧು ಸಿಂಧು ವರ ನಾಪತ್ತೆಯಾದರೂ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ.
ಯೋಗೀಶ್ ಕಾಮೇನಹಳ್ಳಿ
ದಿ ನ್ಯೂಸ್ 24 ಕನ್ನಡ
ಚಿಕ್ಕಮಗಳೂರು