Wednesday, January 27, 2021
Home ಸುದ್ದಿ ಜಾಲ ಟಿಎಂಸಿ ಗೂಂಡಾಗಳಿಂದ ಕಾರಿನ ಮೇಲೆ ಗುಂಡಿನ ದಾಳಿ: ಕೃಷ್ಣೇಂದು ಮುಖರ್ಜಿ ಆರೋಪ

ಇದೀಗ ಬಂದ ಸುದ್ದಿ

ಟಿಎಂಸಿ ಗೂಂಡಾಗಳಿಂದ ಕಾರಿನ ಮೇಲೆ ಗುಂಡಿನ ದಾಳಿ: ಕೃಷ್ಣೇಂದು ಮುಖರ್ಜಿ ಆರೋಪ

 ಅನಾಸೋಲ್: ತನ್ನ ಕಾರಿನ ಮೇಲೆ ತೃಣ ಮೂಲಕ ಕಾಂಗ್ರೆಸ್ ನ ಗೂಂಡಾಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಸಮಿತಿ ಸದಸ್ಯ ಕೃಷ್ಣೆಂದು ಮುಖರ್ಜಿ ಆರೋಪಿಸಿದ್ದಾರೆ.

ಪಶ್ಚಿಮ ಬರ್ಧಾಮನ್ ಜಿಲ್ಲೆಯ ಅಸನ್ಸೋಲ್ ನಲ್ಲಿ ಹಲ್ಲೆಕೋರರು ಕಾರಿನ ಮೇಲೆ ಗುಂಡಿನ ದಾಳಿ ನಡೆಸಿ ಬಾಗಿಲು ತೆರೆಯಲು ವಿಫಲವಾಗಿದ್ದಾರೆ ಎಂದು ದೂರಿದ್ದಾರೆ.

ಆದರೆ ಆಡಳಿತಾರೂಢ ಪಕ್ಷ ಈ ಆರೋಪನನ್ನು ತಳ್ಳಿ ಹಾಕಿದ್ದು, ಮುಖರ್ಜಿ ಅವರ ಹಳೇಯ ಶತೃಗಳಿಂದ ಈ ಘಟನೆ ನಡೆದಿದೆ ಎಂದು ಹೇಳಿದೆ.

ನಾನು ಭಾನುವಾರ ರಾತ್ರಿ ಕೋಲ್ಕತ್ತಾದ ಅಸನ್ಸೋಲ್‌ನ ಹಿರಾಪುರದಿಂದ ಮನೆಗೆ ಹಿಂದಿರುಗುತ್ತಿದ್ದಾಗ, ಟಿಎಂಸಿ ಗೂಂಡಾಗಳು, ನನ್ನ ಕಾರನ್ನು ತೆರೆಯಲು ಪ್ರಯತ್ನಿಸಿದರು, ಅದು ವಿಫಲವಾದ ಕಾರಣ ಅವರು ವಾಹನದ ಮೇಲೆ ಮನಸ್ಸೋ ಇಚ್ಚೆ ಗುಂಡಿನ ದಾಳಿ ನಡೆಸಿದರು ಎಂದು ದೂರಿದ್ದಾರೆ.

ಈ ವೇಳೆ ಕಾರಿನಲ್ಲಿದ್ದ ಡ್ರೈವರ್ ಸಹಾಯಕ್ಕಾಗಿ ಕೂಗಿದನು ಮತ್ತು ಸ್ಥಳೀಯರ ಗಮನವನ್ನು ಸೆಳೆಯಲು ನಾನು ಪದೇ ಪದೇ ಹಾರ್ನ್ ಹೊಡೆದಿ, ಹೀಗಾಗಿ ಹಲ್ಲೆಕೋರರು ಸ್ಥಳದಿಂದ ಓಡಿಹೋದರು” ಎಂದು ಮುಖರ್ಜಿ ತಿಳಿಸಿದ್ದಾರೆ.

ಘಟನೆಯ ಹಿಂದೆ ಟಿಎಂಸಿ ಕೈವಾಡವಿದೆ ಎಂದು ಆರೋಪಿಸಿದ ಅವರು ಘಟನೆಯ ಬಗ್ಗೆ ಹಿರಿಯ ಬಿಜೆಪಿ ಮುಖಂಡರಿಗೆ ಮಾಹಿತಿ ನೀಡಿದ್ದಾಗಿ ತಿಳಿಸಿದ್ದಾರೆ

ಮುಖರ್ಜಿ ಅವರಿಂದ ದೂರು ಬಂದಿದ್ದು, ಈ ಪ್ರದೇಶದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹಿರಾಪುರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೃಷ್ಣೇಂದು ಮುಖರ್ಜಿ, ಹಲವು ಕೊಲೆ. ಸುಲಿಗೆ, ಬೆದರಿಕೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ, ಸುದೀರ್ಘ ಸಮಯದವರೆಗೆ ಆತ ನಾಪತ್ತೆಯಾಗಿದ್ದ ಹೀಗಾಗಿ ಅವರ ಹಳೇಯ ಶತೃಗಳು ಈ ಕೆಲಸ ಮಾಡಿದ್ದಾರ ಎಂದು ಟಿಎಂಸಿ ಅನಸೋಲ್ ದಕ್ಷಿಣ ಶಾಸಕ ಟಾಪಸ್ ಬ್ಯಾನರ್ಜಿ ಆರೋಪಿಸಿದ್ದಾರೆ.

TRENDING