Monday, January 25, 2021
Home ಅಂತರ್ ರಾಜ್ಯ ರಾಜಸ್ಥಾನದಲ್ಲಿ ಕಾಗೆಗಳಲ್ಲಿ ಕಾಣಿಸಿಕೊಂಡ ಹಕ್ಕಿ ಜ್ವರ : ಕೇಂದ್ರದಿಂದ ಹೈ ಅಲರ್ಟ್ ಘೋಷಣೆ

ಇದೀಗ ಬಂದ ಸುದ್ದಿ

ರಾಜಸ್ಥಾನದಲ್ಲಿ ಕಾಗೆಗಳಲ್ಲಿ ಕಾಣಿಸಿಕೊಂಡ ಹಕ್ಕಿ ಜ್ವರ : ಕೇಂದ್ರದಿಂದ ಹೈ ಅಲರ್ಟ್ ಘೋಷಣೆ

 

ರಾಜಸ್ಥಾನದಲ್ಲಿ ಹಕ್ಕಿ ಜ್ವರ ಸಂಭವಿಸುತ್ತಿರುವ ಪ್ರದೇಶಗಳಿಂದ ಮಾದರಿ ಸಂಗ್ರಹಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಜ್ವರ ಲಕ್ಷಣ ಕಂಡುಬಂದವರನ್ನ ಗುರುತಿಸುವ ಪ್ರಕ್ರಿಯೆಯೂ ರಾಜ್ಯದಲ್ಲಿ ಆರಂಭವಾಗಿದೆ.

ರಾಜಸ್ಥಾನದ ಜವಹರಲಾಲ್​ ನಗರದಿಂದ 5 ಕಿಲೋಮೀಟರ್​ ವ್ಯಾಪ್ತಿಯಲ್ಲಿ ಶೀತ, ಕೆಮ್ಮು ಹಾಗೂ ಜ್ವರ ಇರುವವರನ್ನ ಪತ್ತೆ ಹಚ್ಚಲು ಏಜನ್ಸಿಗಳನ್ನ ಸ್ಥಾಪನೆ ಮಾಡಲಾಗಿದೆ. ಈ ಮಧ್ಯೆ ಜವಹಾರ ಲಾಲ್​ ನಗರದಲ್ಲಿ ಸತ್ತ ಕಾಗೆಗಳಲ್ಲಿ ಭೀಕರ ವೈರಸ್ ಇರೋದು ಪತ್ತೆಯಾದ ಬಳಿಕ ರಾಜಸ್ಥಾನದಲ್ಲಿ ಹಕ್ಕಿ ಜ್ವರದ ಎಚ್ಚರಿಕೆಯನ್ನ ನೀಡಲಾಗಿದೆ.

ಪಶುಸಂಗೋಪನಾ ಇಲಾಖೆಯು ರಾಜ್ಯಮಟ್ಟದ ನಿಯಂತ್ರಣ ಕೊಠಡಿಗಳನ್ನ ಸ್ಥಾಪನೆ ಮಾಡಿದೆ. ರಾಜ್ಯದಲ್ಲಿ 252ಕ್ಕೂ ಹೆಚ್ಚು ಪಕ್ಷಿಗಳು ಭೀಕರ ವೈರಸ್​ನಿಂದ ಸಾವನ್ನಪ್ಪಿವೆ ಎನ್ನಲಾಗಿದೆ. ಹಕ್ಕಿ ಜ್ವರದಿಂದ ಸಾವಿಗೀಡಾದ ಹಕ್ಕಿಗಳಲ್ಲಿ ಕಾಗೆಗಳ ಸಾವು ಹೆಚ್ಚಾಗಿದೆ. ಅದರಲ್ಲೂ ಕೋಟಾ ಹಾಗೂ ಜೋದ್​ಪುರದಲ್ಲಿ ಅತಿ ಹೆಚ್ಚು ಸಾವು ವರದಿಯಾಗಿದೆ.

TRENDING