Monday, January 25, 2021
Home ಅಂತರ್ ರಾಜ್ಯ ಇಂದಿನಿಂದ ಬಿಹಾರ, ಪುದುಚೆರಿಯಲ್ಲಿ ಶಾಲಾ – ಕಾಲೇಜು ಆರಂಭ

ಇದೀಗ ಬಂದ ಸುದ್ದಿ

ಇಂದಿನಿಂದ ಬಿಹಾರ, ಪುದುಚೆರಿಯಲ್ಲಿ ಶಾಲಾ – ಕಾಲೇಜು ಆರಂಭ

ಕೊರೊನಾ ಕಾರಣಕ್ಕೆ ಕಳೆದ ಒಂಬತ್ತು ತಿಂಗಳಿನಿಂದ ಬಂದ್ ಆಗಿದ್ದ ಶಾಲಾ – ಕಾಲೇಜುಗಳು ಹಂತಹಂತವಾಗಿ ಆರಂಭವಾಗುತ್ತಿವೆ. ಕರ್ನಾಟಕದಲ್ಲಿ ಹೊಸ ವರ್ಷದಿಂದಲೇ 10 ಮತ್ತು 12ನೇ ತರಗತಿ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಇತರೆ ತರಗತಿಗಳು ಸಹ ಆರಂಭವಾಗುವ ನಿರೀಕ್ಷೆಯಿದೆ. ಇದರ ಜೊತೆಗೆ ವಿದ್ಯಾಗಮ ಯೋಜನೆ ಸಹ ನಡೆಯುತ್ತಿದೆ.

ಇದೀಗ ಜನವರಿ 4 ರ ಇಂದಿನಿಂದ ಬಿಹಾರ ಹಾಗೂ ಪುದುಚೆರಿಯಲ್ಲಿ ಶಾಲಾ – ಕಾಲೇಜುಗಳು ಆರಂಭವಾಗುತ್ತಿದ್ದು, ಇದರ ಜೊತೆಗೆ ಮಹಾರಾಷ್ಟ್ರದ ಪುಣೆ ಹಾಗೂ ನಾಗಪುರದಲ್ಲಿಯೂ ಇಂದಿನಿಂದ ಶಾಲಾ – ಕಾಲೇಜು ಆರಂಭಕ್ಕೆ ಕ್ರಮಕೈಗೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಮಾಸ್ಕ್ ಧಾರಣೆ ಸೇರಿದಂತೆ ಸಾಮಾಜಿಕ ಅಂತರ ಕಾಪಾಡುವುದು ಹೀಗೆ ಹಲವು ಮಾರ್ಗಸೂಚಿಗಳನ್ನು ನೀಡಲಾಗಿದ್ದು, ಇವುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.

ಪುದುಚೇರಿಯಲ್ಲಿ ಶಾಲೆಯ ಎಲ್ಲ ತರಗತಿಗಳು ನಡೆಯಲಿದ್ದು, ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ. ಜನವರಿ 18ರಿಂದ ಶಾಲೆಗಳು ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಪೂರ್ಣಾವಧಿ ಕಾರ್ಯ ನಿರ್ವಹಿಸಲಿವೆ ಎಂದು ಹೇಳಲಾಗಿದೆ. ಇನ್ನು ಬಿಹಾರದಲ್ಲಿ 9ರಿಂದ 12ನೇ ತರಗತಿವರೆಗೆ ಮಾತ್ರ ನಡೆಯಲಿದ್ದು, ಒಮ್ಮೆಗೆ ಶೇಕಡಾ 50 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲು ಸೂಚಿಸಲಾಗಿದೆ. ಪುಣೆ ಮತ್ತು ನಾಗಪುರದಲ್ಲಿ 9ರಿಂದ 12ನೇ ತರಗತಿಗೆ ಮಾತ್ರ ಶಾಲೆ ನಡೆಯಲಿದೆ. ಇನ್ನುಳಿದಂತೆ ಪದವಿ-ಸ್ನಾತಕೋತ್ತರ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ ಈಗಾಗಲೇ ತರಗತಿಗಳು ಆರಂಭವಾಗಿವೆ.

TRENDING