Saturday, January 16, 2021
Home ದೆಹಲಿ ಇಂದು ಮತ್ತೆ ರೈತ ಸಂಘದ ಜೊತೆ ಕೇಂದ್ರದ ಮಾತುಕತೆ

ಇದೀಗ ಬಂದ ಸುದ್ದಿ

ಇಂದು ಮತ್ತೆ ರೈತ ಸಂಘದ ಜೊತೆ ಕೇಂದ್ರದ ಮಾತುಕತೆ

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆ ಮುಂದುವರೆದಿದೆ. ಕೃಷಿ ಮಸೂದೆ ರದ್ಧಾಗುವವರೆಗೆ ಪ್ರತಿಭಟನೆ ಮುಂದುವರೆಯಲಿದೆ ಎಂದು ರೈತರು ಕಿಡಿ ಕಾರಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೊಳಿರುವ ನೂತನ ಕೃಷಿ ಕಾನೂನುಗಳ ರದ್ದತಿಗಾಗಿ ದೆಹಲಿಯ ಗಡಿಯಲ್ಲಿ ಸುಮಾರು ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದು,ಈಗಾಗಲೇ 6 ಸುತ್ತಿನ ಮಾತುಕತೆ ನಡೆಸಿದರೂ ಕೂಡ ಕೇಂದ್ರದಿಂದ ನಿರೀಕ್ಷಿತ ಫಲ ಸಿಕ್ಕಿಲ್ಲ.

ರೈತರು ಕಳೆದ 39 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನಾ ನಿರತರ ರೈತರ ಪೈಕಿ ಹಲವು ಮಂದಿ ರೈತರು ಮೃತಪಟ್ಟಿದ್ದಾರೆ. ಈಗ ಜ.03 ರಂದು ಮಧ್ಯರಾತ್ರಿ ಮತ್ತೆ ಮೂವರು ರೈತರು ಮೃತಪಟ್ಟಿರುವ ವರದಿಗಳು ಬಂದಿವೆ. ಓರ್ವ ರೈತ ಹೃದಯಸ್ತಂಭನದಿಂದ ಮೃತಪಟ್ಟರೆ, ಮತ್ತೋರ್ವ ರೈತ ಜ್ವರದಿಂದ ಬಳಲಿ ಸಾವನ್ನಪ್ಪಿದ್ದಾರೆ,

ಇನ್ನು ರೈತರು ಮತ್ತು ಸರ್ಕಾರದ ನಡುವೆ 7 ನೇ ಸುತ್ತಿನ ಮಾತುಕತೆ ವಿಜ್ಞಾನ ಭವನದಲ್ಲಿ ಇಂದು ನಡೆಯಲಿದೆ. ಡಿಸೆಂಬರ್ 30 ರಂದು ರೈತರು ಮತ್ತು ಸರ್ಕಾರದ ನಡುವೆ 6 ನೇ ಸುತ್ತಿನ ಮಾತುಕತೆ ನಡೆದಿತ್ತು.

TRENDING