Tuesday, January 26, 2021
Home ಸುದ್ದಿ ಜಾಲ ಹುಬ್ಬಳ್ಳಿ-ಅಹಮದಾಬಾದ್‌ ಇಂದಿನಿಂದ ವಿಮಾನ ಹಾರಾಟ ಆರಂಭ

ಇದೀಗ ಬಂದ ಸುದ್ದಿ

ಹುಬ್ಬಳ್ಳಿ-ಅಹಮದಾಬಾದ್‌ ಇಂದಿನಿಂದ ವಿಮಾನ ಹಾರಾಟ ಆರಂಭ

ಹುಬ್ಬಳ್ಳಿ: ಕೋವಿಡ್‌-19 ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳಿಂದ ಸ್ಥಗಿತಗೊಂಡಿದ್ದ ಇಂಡಿಗೋ ಕಂಪೆನಿಯ ಹುಬ್ಬಳ್ಳಿ-ಅಹಮದಾಬಾದ್‌ ನಡುವಿನ ವಿಮಾನಯಾನ ಸೇವೆ ಜ. 4ರಿಂದ ಪುನರಾರಂಭಗೊಳ್ಳಲಿದೆ.

ಸೋಮವಾರ, ಬುಧವಾರ, ಶುಕ್ರವಾರ ಅಹಮದಾಬಾದ್‌- ಹುಬ್ಬಳ್ಳಿ- ಅಹಮದಾಬಾದ್‌ ನಡುವೆ ವಿಮಾನ ಹಾರಾಟ ನಡೆಸಲಿದೆ.

ಸ್ಟಾರ್‌ ಏರ್‌ ಕಂಪೆನಿಯು ಜ. 11ರಿಂದ ಹಿಂಡನ್‌, ತಿರುಪತಿ, ಬೆಂಗಳೂರಿಗೆ ವಿಮಾನಯಾನ ಸೇವೆ ಪುನರಾರಂಭಿಸುತ್ತಿದೆ. ಸೋಮವಾರ, ಬುಧವಾರ, ಶುಕ್ರವಾರ, ರವಿವಾರ ಈ ವಿಮಾನ ಹಾರಾಡಲಿದೆ.

TRENDING