Saturday, January 23, 2021
Home ಸುದ್ದಿ ಜಾಲ ಕ್ರೆಡಿಟ್,ಡೆಬಿಟ್ ಕಾರ್ಡ್ ಬಳಕೆದಾರರಿಗೆ ಶಾಕ್ ನ್ಯೂಸ್

ಇದೀಗ ಬಂದ ಸುದ್ದಿ

ಕ್ರೆಡಿಟ್,ಡೆಬಿಟ್ ಕಾರ್ಡ್ ಬಳಕೆದಾರರಿಗೆ ಶಾಕ್ ನ್ಯೂಸ್

ನವದೆಹಲಿ : ಭಾರತದ ಸುಮಾರು 10 ಕೋಟಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರ ಡೇಟಾ ಡಾರ್ಕ್ ವೆಬ್ ನಲ್ಲಿ ಮಾರಾಟವಾಗುತ್ತಿದೆ ಎಂದು ಸ್ವತಂತ್ರ ಸೈಬರ್ ಭದ್ರತಾ ಸಂಶೋಧಕ ರಾಜಶೇಖರ್ ರಾಜಹರಿಯಾ ಹೇಳಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ರಾಜಶೇಖರ್, ದೇಶದ ಸುಮಾರು 10 ಕೋಟಿಗೂ ಹೆಚ್ಚು, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರ ಡೇಟಾವನ್ನು ಅಘೋಷಿತ ಹಣಕ್ಕೆ ಮಾರಾಟ ಮಾಡಲಾಗಿದೆ. ಹಾಗೂ ಕ್ರಿಪ್ಚೋಕರೆನ್ಸಿ ಬಿಟ್ ಕಾಯಿನ್ ಮೂಲಕ ನಡೆದಿದೆ. ಈ ಡೇಟಾಗಳಿಗೆ ಹ್ಯಾಕರ್ ಗಳು ಟೆಲಿಗ್ರಾಮ್ ಮೂಲಕವೂ ಪ್ರಯತ್ನ ನಡೆಸುತ್ತಿದ್ದಾರೆ ಎಂದಿದ್ದಾರೆ. ಹೀಗಾಗಿ ಈ 10 ಕೋಟಿ ಗ್ರಾಹಕರು ರಿಸ್ಕ್ ನಲ್ಲಿದ್ದಾರೆ ಎಂದು ರಜಾಹರಿಯ ಎಚ್ಚರಿಕೆ ನೀಡಿದ್ದಾರೆ.

ಸೈಬರ್ ದಾಳಿ ಸಂದರ್ಭದಲ್ಲಿ ಯಾವುದೇ ಕಾರ್ಡ್ ಸಂಖ್ಯೆಗಳು ಅಥವಾ ಹಣಕಾಸಿನ ಮಾಹಿತಿಗಳು ರಾಜಿಯಾಗಿಲ್ಲ ಮತ್ತು ವರದಿಯಾಗಿರುವ 10 ಕೋಟಿ ಸಂಖ್ಯೆಗಿಂತ ನೈಜ ಸಂಖ್ಯೆ ತುಂಬಾ ಕಡಿಮೆ ಎಂದು ಜುಸ್ ಪೇ ಹೇಳಿದೆ.

ಆಗಸ್ಟ್ 18,2020 ರಂದು ನಮ್ಮ ಸರ್ವರ್ ನಲ್ಲಿ ಅನಧಿಕೃತ ಪ್ರಯತ್ನವೊಂದು ನಡೆದಿದ್ದು, ನಮಗೆ ಪತ್ತೆಯಾಗಿದೆ ನಂತರ ಅದನ್ನು ಟರ್ಮಿನೆಟ್ ಮಾಡಲಾಗಿದೆ. ಈ ವೇಳೆ ಯಾವುದೇ ಕಾರ್ಡ್ ನ ನಂಬರ್ ಗಳು, ಹಣಕಾಸಿನ ವ್ಯವಹಾರ ಅಥವಾ ವಹಿವಾಟಿನ ಡೇಟಾವನ್ನು ಹೊಂದಾಣಿಕೆ ಮಾಡಲಾಗಿಲ್ಲ ಎಂದು ಜುಸ್ ಪೇ ಹೇಳಿದೆ.

TRENDING