Sunday, January 24, 2021
Home ಕೋವಿಡ್-19 ಕೋವಿಶೀಲ್ಡ್ ಲಸಿಕೆ ಬೆಲೆಯ ಕುರಿತು ಮಾಹಿತಿ ನೀಡಿದ ಸೆರಮ್ ಸಿಇಒ

ಇದೀಗ ಬಂದ ಸುದ್ದಿ

ಕೋವಿಶೀಲ್ಡ್ ಲಸಿಕೆ ಬೆಲೆಯ ಕುರಿತು ಮಾಹಿತಿ ನೀಡಿದ ಸೆರಮ್ ಸಿಇಒ

ನವದೆಹಲಿ : ಕೋವಿಡ್ -19 ಲಸಿಕೆಯ ಅಭಿಯಾನವು ಮುಂಬರುವ ದಿನಗಳಲ್ಲಿ ಭಾರತದಲ್ಲಿ ಪ್ರಾರಂಭಿಸಲಿದೆ. ಭಾರತದ ಡ್ರಗ್ ಕಂಟ್ರೋಲರ್ ಜನರಲ್ (ಡಿಸಿಜಿಐ) ಡಾ.ವಿ.ಜಿ ಸೋಮಾನಿ ಅವರು ಭಾನುವಾರ (ಜ.3) ಕರೋನವೈರಸ್ ವಿರುದ್ಧ ತುರ್ತು ಬಳಕೆಗಾಗಿ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ದ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ನ ಕೊವಾಕ್ಸಿನ್ ಅನ್ನು ಅನುಮೋದಿಸಿದರು.

ಈ ಮಧ್ಯೆ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನಾವಾಲಾ ಅವರು ಭಾನುವಾರ ಕೊವಿಶೀಲ್ಡ್ ಬೆಲೆಗಳನ್ನು ಬಹಿರಂಗಪಡಿಸಿದ್ದಾರೆ ಮತ್ತು ತಮ್ಮ ಕಂಪನಿಯು ಲಸಿಕೆಗೆ ಎರಡು ವಿಭಿನ್ನ ಬೆಲೆಗಳನ್ನು ನಿಗದಿಮಾಡಿದೆ ಎಂದು ಬಹಿರಂಗಪಡಿಸಿದ್ದಾರೆ.

ಕೋವಿಶೀಲ್ಡ್ ಲಸಿಕೆ ತಯಾರಕ ಸಂಸ್ಥೆ, ಸರ್ಕಾರಕ್ಕೆ ಪೂರೈಸುವ ಮೊದಲ 100 ಮಿಲಿಯನ್ ಲಸಿಕೆಗಳಿಗೆ ಪ್ರತಿ ಡೋಸ್‌ಗೆ 200 ರೂ ವಿಶೇಷ ದರವನ್ನು ವಿಧಿಸಲು ಯೋಜಿಸಿದೆ. ಆದರೆ ಲಸಿಕೆಯನ್ನು ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಡೋಸ್‌ಗೆ 1,000ರೂ ದರದಲ್ಲಿ ನಿಗದಿಪಡಿಸಲು ಸಂಸ್ಥೆ ನಿರ್ಧರಿಸಿದೆ ಎನ್ನಲಾಗಿದೆ.

ಸೀರಮ್ ಇನ್ಸ್ಟಿಟ್ಯೂಟ್ 300 ಮಿಲಿಯನ್ 400 ಮಿಲಿಯನ್ ಡೋಸ್ ಲಸಿಕೆಗಾಗಿ ಸಂಸ್ಥೆಯೊಂದಿಗೆ ದೊಡ್ಡ ಒಪ್ಪಂದಕ್ಕೆ ಸಹಿ ಹಾಕುವ ಪ್ರಕ್ರಿಯೆಯಲ್ಲಿದೆ.

TRENDING