Saturday, January 23, 2021
Home ಸುದ್ದಿ ಜಾಲ S.T. ಮೀಸಲಾತಿ 7.5 ರಷ್ಟು ಹೆಚ್ಚಳ ಬಗ್ಗೆ ಶೀಘ್ರ ನಿರ್ಧಾರ; ಸಚಿವ ಶ್ರೀರಾಮುಲು

ಇದೀಗ ಬಂದ ಸುದ್ದಿ

S.T. ಮೀಸಲಾತಿ 7.5 ರಷ್ಟು ಹೆಚ್ಚಳ ಬಗ್ಗೆ ಶೀಘ್ರ ನಿರ್ಧಾರ; ಸಚಿವ ಶ್ರೀರಾಮುಲು

 ಬಾಗಲಕೋಟೆ: ಪರಿಶಿಷ್ಟ ಪಂಗಡಕ್ಕೆ 7.5 ರಷ್ಟು ಮೀಸಲಾತಿಯನ್ನು ಹೆಚ್ಚಿಸುವ ಕುರಿತಾಗಿ ಶೀಘ್ರವೇ ಕ್ರಮಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಕಾಲಮಿತಿ ಇಲ್ಲವಾದರೂ ಶೀಘ್ರವೇ ಮೀಸಲಾತಿಯನ್ನು ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ನನ್ನ ಅಧ್ಯಕ್ಷತೆಯ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಮೀಸಲಾತಿ ಕುರಿತು ಚರ್ಚಿಸಲಾಗಿದೆ. 100 ಜಾತಿಗಳು ಎಸ್.ಸಿ., 50 ಜಾತಿಗಳು ಎಸ್.ಟಿ. ಮೀಸಲಾತಿಯಲ್ಲಿದ್ದು, ಇವೆರಡು ಸೇರಿ ಮೀಸಲಾತಿ ಶೇಕಡ 15 ರಿಂದ ಶೇಕಡ 17ರಷ್ಟು ಆಗಬೇಕಿದೆ. ನ್ಯಾಯಮೂರ್ತಿ ನಾಗಮೋಹನದಾಸ್ ಅವರ ವರದಿಯಲ್ಲಿ ಮೀಸಲಾತಿಯನ್ನು ಶೇಕಡ 3 ರಿಂದ ಶೇಕಡ 7.5 ರಷ್ಟು ಹೆಚ್ಚಿಸಬೇಕೆಂದಿದ್ದು, ಇದರ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಶೀಘ್ರವೇ ಎಸ್.ಟಿ. ಮೀಸಲಾತಿ ಹೆಚ್ಚಳ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

TRENDING