ಇಂದು ನಡೆಯಲಿರುವ ರಾಷ್ಟ್ರೀಯ ಹವಾಮಾನ ವಿಜ್ಞಾನ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನಾ ಭಾಷಣ ಮಾಡಲಿದ್ದು, ದೇಶದ ಸಮಗ್ರ ಅಭಿವೃದ್ಧಿಗೆ ‘ಮೆಟರೋಲಜಿ‘ ಕುರಿತು ಮಾತನಾಡಲಿದ್ದಾರೆ.
ನ್ಯಾಷನಲ್ ಮೆಟರಾಲಜಿ ಕಾನ್ಕ್ಲೇವ್ 2020 ಅನ್ನ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್-ನ್ಯಾಷನಲ್ ಫಿಸಿಕಲ್ ಲ್ಯಾಬೊರೇಟರಿ (ಸಿಎಸ್ ಐಆರ್-ಎನ್ ಪಿಎಲ್) ನವದೆಹಲಿ ಆಯೋಜಿಸುತ್ತಿದ್ದು, ಪ್ರಧಾನಿ ಮೋದಿ ಅವರು ದೇಶವನ್ನುದ್ದೇಶಿಸಿ ಇಂದು ಮಾತನಾಡಲಿದ್ದಾರೆ.
ಪ್ರಧಾನಿ ಮೋದಿ ಅವರು ‘ರಾಷ್ಟ್ರೀಯ ಪರಮಾಣು ಕಾಲಮಾಪಕ’, ‘ಭಾರತೀಯ ನಿರ್ದೇಶಕ್ ದ್ರವ್ಯ’ ವನ್ನ ದೇಶಕ್ಕೆ ಸಮರ್ಪಿಸಲಿದ್ದು, ರಾಷ್ಟ್ರೀಯ ಪರಿಸರ ಗುಣಮಟ್ಟ ಪ್ರಯೋಗಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.