Tuesday, January 26, 2021
Home ಅಂತರ್ ರಾಜ್ಯ ಹಿಮಾಚಲ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಬಳಿ ಭೂಕುಸಿತ : ಸಂಚಾರ ಅಸ್ತವ್ಯಸ್ತ

ಇದೀಗ ಬಂದ ಸುದ್ದಿ

ಹಿಮಾಚಲ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಬಳಿ ಭೂಕುಸಿತ : ಸಂಚಾರ ಅಸ್ತವ್ಯಸ್ತ

 ಕಿನ್ನೌರ್, ಹಿಮಾಚಲ ಪ್ರದೇಶ: ಇಲ್ಲಿನ ಕಿನ್ನೌರ್-ಕಾಜಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಕೊ ಸಮೀಪ ಸೋಮವಾರ ಭೂಕುಸಿತವಾಗಿದೆ. ಸಂಚಾರ ಸ್ಥಗಿತವಾಗಿದ್ದು, ನೂರಾರು ಜನರು ಸಿಕ್ಕಿಬಿದ್ದಿದ್ದಾರೆ.

ಈ ರಸ್ತೆಯು ಲಾಹೌಲ್‌-ಸ್ಪಿತಿ ಜಿಲ್ಲೆಗೆ ಸಂಪರ್ಕ ಒದಗಿಸಲಿದ್ದು, ವಿವಿಧ ಗ್ರಾಮಗಳು ಭೂಕುಸಿತ ಮತ್ತು ಹಿಮಪಾತದಿಂದಾಗಿ ಇತರೆ ಭಾಗದೊಂದಿಗೆ ಸಂಪರ್ಕ ಕಳೆದುಕೊಂಡಿವೆ. ಭೂಕುಸಿತ ಸ್ಥಳದಿಂದ ಎರಡೂ ಬದಿ ರಸ್ತೆಯಲ್ಲಿ ಅಸಂಖ್ಯ ವಾಹನಗಳು ಸಾಲುಗಟ್ಟಿವೆ. ಗಡಿ ರಸ್ತೆ ಸಂಘಟನೆಯ (ಬಿಆರ್‌ಒ) ಸಿಬ್ಬಂದಿ ಪರಿಸ್ಥಿತಿ ತಹಬದಿಗೆ ತರಲು ಯತ್ನಿಸುತ್ತಿದ್ದಾರೆ.

TRENDING