Tuesday, January 19, 2021
Home ದೆಹಲಿ ರೈತ ಸಮುದಾಯಕ್ಕೆ ಇಲ್ಲಿದೆ ಮುಖ್ಯ ಮಾಹಿತಿ

ಇದೀಗ ಬಂದ ಸುದ್ದಿ

ರೈತ ಸಮುದಾಯಕ್ಕೆ ಇಲ್ಲಿದೆ ಮುಖ್ಯ ಮಾಹಿತಿ

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್‌ ಯೋಜನೆಯ ಮೊತ್ತವಿನ್ನೂ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗಿಲ್ವಾ? ಹಾಗಾದ್ರೆ, ಸ್ಟೇಟಸ್ ಚೆಕ್ ಮಾಡಿ. ಯೋಜನೆಗೆ ಸಲ್ಲಿಸಿದ ದಾಖಲೆಗಳು ಸರಿಯಾಗಿದ್ದರೆ ಮಾತ್ರ ಯೋಜನೆಯ ಲಾಭ ಸಿಗಲಿದೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ಪಿಎಂ-ಕಿಸಾನ್ ಯೋಜನೆ) ಅಡಿಯಲ್ಲಿ, 7ನೇ ಕಂತಿನ ಹಣವನ್ನ 2021ರ ಮಾರ್ಚ್ 31ರವರೆಗೆ ರೈತರ ಬ್ಯಾಂಕ್ ಖಾತೆಗೆ ಕಳುಹಿಸಲಾಗುತ್ತೆ. ರಾಜ್ಯಗಳಿಂದ ಪರಿಶೀಲನೆ ಕಾರ್ಯ ಮುಂದುವರಿದರೆ ಕೇಂದ್ರದಿಂದ ಹಣ ಬಿಡುಗಡೆಯಾಗುತ್ತದೆ. ಈ ಮಧ್ಯೆ ಕಳೆದ 6 ದಿನಗಳಲ್ಲಿ ಮೋದಿ ಸರ್ಕಾರ ರೈತರ ಖಾತೆಗಳಿಗೆ 6,22,969 ರೂಪಾಯಿ ಸೇರಿಸಿದೆ. ಇದರಿಂದ ಅವರು ಕೃಷಿಗೆ ಸಂಬಂಧಿಸಿದ ತಮ್ಮ ಅಗತ್ಯಗಳನ್ನ ಪೂರೈಸಿಕೊಳ್ಳಬೋದು.

ಅರ್ಜಿ ಸಲ್ಲಿಸಿದ ನಂತರವೂ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲಎಂದಾದಲ್ಲಿ, ನೀವು ಸಲ್ಲಿಸಿದ ಅರ್ಜಿಯಲ್ಲಿ ಏನಾದರೂ ತಪ್ಪುಗಳು ಇದ್ರೆ ಅದನ್ನ ಪರಿಶೀಲಿಸಿ. ನೀವು ಮಾಡಿದ ತಪ್ಪಗಳನ್ನ ಸರಿಪಡಿಸಿಕೊಂಡರೆ ಮುಂದಿನ ದಿನಗಳಲ್ಲಿ ನಿಮಗೆ ಲಾಭವಾಗೋದು ಖಂಡಿತ. ಇಲ್ಲದಿದ್ರೆ, ನೀವು ಕಂತು ವಂಚಿತರಾಗ್ತಿರಾ. ನಿಮ್ಮ ಪರಿಶೀಲನೆಯು ನಡೆದಾಗ ನಿಮಗೆ ಹಣ ದೊರೆಯುತ್ತೆ. ಕೊನೆಯ ಕಂತು ಪಡೆಯಲು ಸದ್ಯಕ್ಕೆ ಯಾವುದೇ ಅವಕಾಶ ಇಲ್ಲ. ದೇಶದ 1.44 ಕೋಟಿ ರೈತರಿಗೆ ಅರ್ಜಿ ಸಲ್ಲಿಸಿ ಹಣ ಪಡೆಯಲು ಸಾಧ್ಯವಾಗಿಲ್ಲ, ದಾಖಲೆಗಳಲ್ಲಿ ದೋಷವಿದೆ ಅಥವಾ ಆಧಾರ್ ಕಾರ್ಡ್ ಇಲ್ಲದಿದ್ರೆ ಕಂತಿನ ಮೊತ್ತ ದೊರಯೋಲ್ಲ.

ಅದೆಷ್ಟು ರೈತರು ಉತ್ತಮ ದಾಖಲೆ ಹೊಂದಿದ್ದಾರೆ..!
ಪ್ರಧಾನಿ ನರೇಂದ್ರ ಮೋದಿ ಅವರು 9 ಕೋಟಿ ರೈತರ ಬ್ಯಾಂಕ್ ಖಾತೆಗೆ 18 ಸಾವಿರ ಕೋಟಿಯನ್ನ 7ನೇ ಕಂತಿನ ರೂಪದಲ್ಲಿ ವರ್ಗಾಯಿಸಿದ್ದಾರೆ. ಅದಾದ ನಂತರವೂ ಹಣ ಕಳುಹಿಸುವ ಆದೇಶ ಮುಂದುವರಿದಿದೆ. ಈಗ ಡಿಸೆಂಬರ್ʼವರೆಗೆ ಈ ಯೋಜನೆಯ 11.45 ಫಲಾನುಭವಿಗಳಿದ್ದಾರೆ. ಈ ರೈತರು ಅವರ ಕಾಗದ ಪತ್ರಗಳನ್ನು ಚೆನ್ನಾಗಿ ನಿರ್ವಹಿಸುತ್ತಾರೆ. ಈ ಯೋಜನೆ ಮೂಲಕ ಹೆಚ್ಚಿನ ರೈತರಿಗೆ ನೇರವಾಗಿ ಅವರ ಖಾತೆಗೆ ಹಣ ಜಮಾ ಮಾಡಲು ಸರಕಾರ ಮುಂದಾಗಿದೆ.

ಎಷ್ಟು ಹಣ ಪಡೆಯುತ್ತೀರಿ..!
ಕಳೆದ 24 ತಿಂಗಳಲ್ಲಿ ಕೇಂದ್ರ ಸರ್ಕಾರ ರೈತರ ಖಾತೆಗೆ ನೇರವಾಗಿ 1.1 ಲಕ್ಷ ಕೋಟಿ ರೂಪಾಯಿ ವರ್ಗಾಹಿಸಿದ್ದು, ಪ್ರತಿ ವರ್ಷ ಈ ಯೋಜನೆಗೆ ಸುಮಾರು 75 ಸಾವಿರ ಕೋಟಿ ಅನುದಾನ ಮೀಸಲಿಟ್ಟಿದೆ. ಅಂದರೆ, ಮುಂದಿನ 10 ವರ್ಷಗಳಲ್ಲಿ ರೈತರಿಗೆ ಸುಮಾರು 7.5 ಲಕ್ಷ ಕೋಟಿ ರೂಪಾಯಿ ದೊರೆಯಲಿದೆ. ಅದರ ನೋಂದಣಿ ಯಾವಾಗಲೂ ತೆರೆದಿರೋದ್ರಿಂದ ರೈತರು ಯಾವಾಗ ಬೇಕಾದ್ರೂ ಅರ್ಜಿ ಸಲ್ಲಿಸಬಹುದು.

TRENDING