Saturday, January 23, 2021
Home ಬೆಂಗಳೂರು ಬೆಂಗಳೂರಿನಲ್ಲಿ ಟಿಪ್ಪು ಕಾಲದ ಮದ್ದು-ಗುಂಡುಗಳು, ವಿಗ್ರಹಗಳು ಪತ್ತೆ..!

ಇದೀಗ ಬಂದ ಸುದ್ದಿ

ಬೆಂಗಳೂರಿನಲ್ಲಿ ಟಿಪ್ಪು ಕಾಲದ ಮದ್ದು-ಗುಂಡುಗಳು, ವಿಗ್ರಹಗಳು ಪತ್ತೆ..!

 ಬೆಂಗಳೂರು, ಜ.3- ಬೆಂಗಳೂರಿನ ಪುರಾತನ ದೇವಾಲಯ ಜಲಕಂಠೇಶ್ವರ ದೇಗುಲದ ಹಿಂಭಾಗ ಕಟ್ಟಡ ಕಾಮಗಾರಿ ಪಾಯ ತೆಗೆಯುವಾಗ ಮದ್ದುಗುಂಡುಗಳು, ಪುರಾತನ ಕಾಲದ ವಿಗ್ರಹಗಳು ಪತ್ತೆಯಾಗಿವೆ.ಕಲಾಸಿಪಾಳ್ಯದ ಟಿಪ್ಪು ಕೋಟೆ ಬಳಿ ಇರುವ 1500 ವರ್ಷಗಳ ಹಳೆಯದಾದ ಜಲಕಂಠೇಶ್ವರ ದೇವಾಲಯದ ಬಳಿ ಪಾಯ ತೆಗೆಯುವಾಗ ಟಿಪ್ಪು ಕಾಲದ ಮದ್ದುಗುಂಡುಗಳು ಹಾಗೂ ಪುರಾತನ ಕಾಲದ ವಿಗ್ರಹಗಳು ಪತ್ತೆಯಾಗಿ ಅಚ್ಚರಿ ಮೂಡಿಸಿದೆ.

ಈ ದೇವಾಲಯ 1500 ವರ್ಷಗಳಿಗೂ ಹಳೆಯದಾಗಿದ್ದು, ಈ ಭಾಗದಲ್ಲಿ ನಿ ಇದೆ ಎಂದು ಹೇಳಲಾಗಿತ್ತು. ಟಿಪ್ಪು ಕೂಡ ಈ ದೇವಸ್ಥಾನಕ್ಕೆ ನಡೆದುಕೊಳ್ಳುತ್ತಿದ್ದ ಪೂಜೆ-ಪುನಸ್ಕಾರಗಳನ್ನು ಮಾಡುತ್ತಿದ್ದನೆಂದು ಹೇಳಲಾಗಿದೆ.

ಜಲಕಂಠೇಶ್ವರ ದೇವಾಲಯ ಅತ್ಯಂತ ಪುರಾತನ ದೇವಾಲಯವಾಗಿದ್ದು, ದೇ ದೇವಾಲಯಕ್ಕೆ ಭೇಟಿ ನೀಡಿ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ಪ್ರತೀತಿ ಇದೆ.

ದೇವಾಲಯದ ಹಿಂಭಾಗ ಪಾಯ ತೆಗೆಯುವಾಗ ಹಳೆ ಕಾಲದ ವಿಗ್ರಹಗಳು ಪತ್ತೆಯಾಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಇನ್ನಷ್ಟು ಉತ್ಖನನ ಮಾಡಿದರೆ ಮತ್ತಷ್ಟು ವಿಗ್ರಹಗಳು, ಹಳೆಯ ಕಾಲದ ಪಳೆಯುಳಿಕೆಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇಂದು ಮದ್ದುಗುಂಡುಗಳು, ಪತ್ತೆಯಾಗಿರುವ ವಿಗ್ರಹಗಳನ್ನು ಪುರಾತತ್ವ ಇಲಾಖೆಯವರು ಪರಿಶೀಲನೆ ನಡೆಸಿದ್ದಾರೆ. ಉತ್ಖನನ ಮಾಡಬೇಕೆ, ಬೇಡವೆ ಎಂಬ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.

ಈ ಹಿಂದೆಯೂ ಕೂಡ ಈ ಭಾಗದಲ್ಲಿ ಬಿಬಿಎಂಪಿಯವರು ಕಾಮಗಾರಿ ನಡೆಸುವಾಗ ದೊಡ್ಡ ಮಟ್ಟದ ಮದ್ದುಗುಂಡುಗಳು ದೊರಕಿದ್ದವು. ಈಗ ಪುರಾತನ ಕಾಲದ ಶಿಲಾ ವಿಗ್ರಹಗಳು ಕಂಡುಬಂದಿರುವುದು ಕುತೂಹಲ ಮೂಡಿಸಿದೆ.

TRENDING