Monday, January 18, 2021
Home ರಾಜ್ಯ ಹಿಂದೂ ದೇವತೆಗೆಳ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ : ಶಾಸಕ ಮುರುಗೇಶ್ ನಿರಾಣಿ ವಿರುದ್ಧ ದೂರು...

ಇದೀಗ ಬಂದ ಸುದ್ದಿ

ಹಿಂದೂ ದೇವತೆಗೆಳ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ : ಶಾಸಕ ಮುರುಗೇಶ್ ನಿರಾಣಿ ವಿರುದ್ಧ ದೂರು ದಾಖಲು

ಬೆಂಗಳೂರು : ಹಿಂದೂ ದೇವತೆಗಳ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ, ಮಾಜಿ ಸಚಿವ ಮುರಗೇಶ್ ನಿರಾಣಿ ವಿರುದ್ಧ ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಮಾರಂಭವೊಂದರಲ್ಲಿ ನಿರಾಣಿ ಅವರು ಹಿಂದೂ ದೇವತೆಗಳನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡಿದ್ದರು ಎಂದು ಆರೋಪಿಸಲಾಗಿದ್ದು, ಮಗಳನ್ನೇ ಮದುವೆಯಾದ ಬ್ರಹ್ಮ ನಮಗೆ ದೇವರು, 16 ಸಾವಿರ ಹೆಂಡದಿಂದರನ್ನು ಮದುವೆಯಾದ ದನಾಕಾಯುವ ಕೃಷ್ಣ ದೇವರು, ಮುಗ್ದ ಬಾಲಕೀಯರು ಸರೋವರದಲ್ಲಿ ಬೆತ್ತಲೆ ಸ್ನಾನ ಮಾಡುವಾಗ ಸೀರೆ ಕದ್ದ ತುಡುಗ ನಮ್ಮ ದೇವರು, ತಲೆ ಮೇಲೆ ಒಬ್ಬಳು, ತೊಡೆಯ ಮೇಲೆ ಒಬ್ಬಳನ್ನು ಇಟ್ಟುಕೊಂಡಾತ ನಮಗೆ ದೇವರು ಎಂದು ಅವಾಮಾನಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಇನ್ನು ತುಂಬು ಗರ್ಭಿಣಿಯನ್ನು ಕಾಡಿಗಟ್ಟಿದ ರಾಮ ನಮ್ಮ ದೇವರು, ಹಾವು, ಹಂದಿ, ಕುದುರೆ ಕತ್ತೆ, ನಾಯಿ, ಆಕಳು, ರತ್ನ ಪಕ್ಷಿ ದೇವಾರದರೆ ಕಾಗೆ, ಗೂಬೆ, ಬೆಕ್ಕು ಇವು ಅಪಶಕುನ. ಜರಾಸಂಧನ ಹೆಂಡತಿ ವೃಂದಾಳನ್ನು ಅತ್ಯಾಚಾರ ಮಾಡಿದ ವಿಷ್ಣು ನಮ್ಮ ದೇವರು. ಸನಾತನಿಗಳು ತಮ್ಮ ತೀಟೆಗೆ ನೂರೆಂಟು ಕಥೆ ಕಟ್ಟಿ ಸ್ತ್ರೀಯರನ್ನು ಅವಹೇಳನ ಮಾಡಿದ್ದಾರೆ ಎಂದು ಕಿಡಿಕಾರಿದ್ದರು.

TRENDING