Sunday, January 24, 2021
Home ರಾಜ್ಯ ಅಬಕಾರಿ ಆದಾಯ ಇಳಿಕೆಯಾಗಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಸಚಿವ ನಾಗೇಶ್.!

ಇದೀಗ ಬಂದ ಸುದ್ದಿ

ಅಬಕಾರಿ ಆದಾಯ ಇಳಿಕೆಯಾಗಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಸಚಿವ ನಾಗೇಶ್.!

 ಸರ್ಕಾರಕ್ಕೆ ಪ್ರಮುಖ ಆದಾಯ ಮೂಲವಾಗಿರುವ ಅಬಕಾರಿಯಲ್ಲಿ ಲಾಕ್ ಡೌನ್ ಸಡಿಲಿಕೆ ಬಳಿಕವೂ ನಿರೀಕ್ಷಿತ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿಲ್ಲ. ಇದೀಗ ಅಬಕಾರಿ ಸಚಿವ ನಾಗೇಶ್ ಇದರ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

ಅಬಕಾರಿ ಇಲಾಖೆಯ ಬೆಂಗಳೂರು ಉತ್ತರ ಮತ್ತು ದಕ್ಷಿಣ ವಿಭಾಗದ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ವೇಳೆ ಮಾತನಾಡಿರುವ ಅವರು, ವರ್ಕ್ ಫ್ರಂ ಹೋಮ್ ಸಂಸ್ಕೃತಿಯಿಂದಾಗಿ ಅಬಕಾರಿ ಇಲಾಖೆಯ ಆದಾಯ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

ಹೀಗಾಗಿ ವರ್ಕ್ ಫ್ರಂ ಹೋಂ ಸಂಸ್ಕೃತಿಯನ್ನು ಕೈಬಿಡುವಂತೆ ತಾವು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡುವುದಾಗಿ ಸಚಿವ ನಾಗೇಶ್ ತಿಳಿಸಿದ್ದು, ಇದಕ್ಕೆ ಮುಖ್ಯಮಂತ್ರಿಗಳು ಸ್ಪಂದಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

TRENDING