Tuesday, January 26, 2021
Home ಸುದ್ದಿ ಜಾಲ ಕೇವಲ ಒಂದು ಮಿಸ್ಡ್ ಕಾಲ್ ನೀಡಿದ್ರೆ ಮನೆಗೆ ಬರುತ್ತೆ ಸಿಲಿಂಡರ್

ಇದೀಗ ಬಂದ ಸುದ್ದಿ

ಕೇವಲ ಒಂದು ಮಿಸ್ಡ್ ಕಾಲ್ ನೀಡಿದ್ರೆ ಮನೆಗೆ ಬರುತ್ತೆ ಸಿಲಿಂಡರ್

ಹೊಸ ವರ್ಷ ಎಲ್ ಪಿ ಜಿ ಸಿಲಿಂಡರ್ ಬುಕ್ ಮಾಡುವುದು ಮತ್ತಷ್ಟು ಸುಲಭವಾಗಿದೆ.

ದೇಶದ ಅತಿದೊಡ್ಡ ತೈಲ ಮಾರುಕಟ್ಟೆ ಕಂಪನಿ ಇಂಡಿಯನ್ ಆಯಿಲ್ ಈ ವರ್ಷದಿಂದ ಮಿಸ್ಡ್ ಕಾಲ್ ಸೌಲಭ್ಯವನ್ನು ಪ್ರಾರಂಭಿಸಿದೆ. ಕಂಪನಿಯು ಈ ಸೇವೆಯನ್ನು ಇಡೀ ದೇಶದಾದ್ಯಂತ ಪ್ರಾರಂಭಿಸಿದೆ.

ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 8454955555 ಗೆ ಮಿಸ್ಡ್ ಕಾಲ್ ಮಾಡಬೇಕು. ಇದಕ್ಕಾಗಿ ಗ್ರಾಹಕರಿಂದ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಸರತಿ ಸಾಲಿನಲ್ಲಿ ನಿಲ್ಲುವುದಾಗ್ಲಿ, ಕರೆ ಮಾಡುವುದಾಗಲಿ ಅವಶ್ಯಕತೆಯಿಲ್ಲ. ಕೇವಲ ಮಿಸ್ಡ್ ಕಾಲ್ ನೀಡಿದ್ರೆ ಸಾಕಾಗುತ್ತದೆ.

ಇನ್ನು ಇಂಡೇನ್ ಗ್ರಾಹಕರು ವಾಟ್ಸಾಪ್ ಮೂಲಕವೂ ಸಿಲಿಂಡರ್ ಕಾಯ್ದಿರಿಸಬಹುದು. REFILL ಎಂದು ಬರೆದು 7588888824 ನಂಬರ್ ಗೆ ವಾಟ್ಸಾಪ್ ಮಾಡಬೇಕು. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದಲೇ ನೀವು ವಾಟ್ಸಾಪ್ ಮಾಡಬೇಕಾಗುತ್ತದೆ.

ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಭುವನೇಶ್ವರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಿಸ್ಡ್ ಕಾಲ್ ಸೌಲಭ್ಯವನ್ನು ಪರಿಚಯಿಸಿದ್ದಾರೆ. ಈ ವೇಳೆ ಮಾತನಾಡಿದ ಧರ್ಮೇಂದ್ರ ಪ್ರಧಾನ್, ಒಂದು ದಿನದ ಬದಲು ಸಿಲಿಂಡರ್ ಬುಕ್ ಆಗಿ ಕೆಲವೇ ಗಂಟೆಯಲ್ಲಿ ಸಿಲಿಂಡರ್ ನೀಡಬೇಕೆಂದು ಅವ್ರು ಹೇಳಿದ್ದಾರೆ.

TRENDING