Saturday, January 23, 2021
Home ಕೋವಿಡ್-19 'ಕೊರೋನಾ ಲಸಿಕೆ' ಕುರಿತು ಹೊಸ ಬಾಂಬ್ ಸಿಡಿಸಿದ 'ಸಮಾಜವಾದಿ ನಾಯಕ'

ಇದೀಗ ಬಂದ ಸುದ್ದಿ

‘ಕೊರೋನಾ ಲಸಿಕೆ’ ಕುರಿತು ಹೊಸ ಬಾಂಬ್ ಸಿಡಿಸಿದ ‘ಸಮಾಜವಾದಿ ನಾಯಕ’

ಲಕ್ನೋ : ದೇಶದಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಕೋವಿಶೀಲ್ಡ್ ಲಸಿಕೆಯನ್ನು ಕೊರೋನಾ ಸೋಂಕಿತರ ತುರ್ತು ಚಿಕಿತ್ಸೆಗಾಗಿ ಬಳಕೆ ಮಾಡಲು ತಜ್ಞರ ಸಮಿತಿಯು ಡಿಜೆಐಸಿಗೆ ಶಿಫಾರಸ್ಸು ಮಾಡಿದೆ. ಇದೀಗ ಅಂತಿಮ ಅನುಮೋದನೆಯೊಂದೆ ಬಾಕಿಯಿದೆ. ಇಂತ ಸಂದರ್ಭದಲ್ಲಿಯೇ ಕೊರೋನಾ ಲಸಿಕೆ ಪಡೆದ್ರೇ ಮಕ್ಕಳಾಗುವುದಿಲ್ಲ ಎಂಬುದಾಗಿ ಹೊಸ ಬಾಂಬ್ ಒಂದನ್ನು ಸಮಾಜವಾದಿ ಪಕ್ಷದ ಎಂ.ಎಲ್.ಸಿ ಅಶುತೋಶ್ ಸಿನ್ಹ ಸಿಡಿಸಿದ್ದಾರೆ.

ಒಂದೆಡೆ ಉತ್ತರ ಪ್ರದೇಶದ ಮಾಜಿ ಸಿಎಂ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ತನಗೆ ಬಿಜೆಪಿಯ ಮೇಲೆ ವಿಶ್ವಾಸವಿಲ್ಲ. ಹೀಗಾಗಿ ತಾನು ಬಿಜೆಪಿ ವಿತರಿಸುವಂತ ಕೊರೋನಾ ಲಸಿಕೆಯನ್ನು ಪಡೆಯುವುದಿಲ್ಲ ಎಂಬುದಾಗಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ, ಸಮಾಜವಾದಿ ಪಕ್ಷದ ಎಂ.ಎಲ್.ಸಿ ಆಗಿರುವಂತ ಅಶುತೋಶ್ ಸಿನ್ಹಾ ಕೂಡ ಕೊರೋನಾ ಲಸಿಕೆಯಿಂದ ಮಕ್ಕಳಾಗದಿರುವ ಸಮಸ್ಯೆ ಉಂಟಾಗಲಿದೆ ಎಂಬುದಾಗಿ ಹೊಸ ಬಾಂಬ್ ಸಿಡಿಸಿದ್ದಾರೆ.

ಇನ್ನೂ ಮುಂದುವರೆದು ಉತ್ತರ ಪ್ರದೇಶದ ನಾಗರೀಕರು ಬಿಜೆಪಯ ಕೊರೋನಾ ಲಸಿಕೆಯಿಂದ ದೂರವಿರಬೇಕು ಎಂದಿದ್ದಾರೆ. ಇಂತಹ ಸಮಾಜವಾದಿ ಪಕ್ಷದ ಎಂ.ಎಲ್.ಸಿ ಅಶುತೋಶ್ ಸಿನ್ಹಾ ಹೇಳಿಕೆಯ ವಿರುದ್ಧ ಕಿಡಿಕಾರಿರುವ ಅನೇಕ ರಾಜಕೀಯ ಮುಖಂಡರು, ಭಾರೀ ವಿರೋಧವನ್ನು ವ್ಯಕ್ತ ಪಡಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆಯ ಮಧ್ಯೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್, ಪೊಲೀಯೋ ಲಸಿಕೆ ಭಾರತದಲ್ಲಿ ಹಾಕುವುದೆಂದು ನಿಗದಿ ಪಡಿಸಿದಾಗಲೂ ಹೀಗೆ ಹಲವು ಅಪಪ್ರಚಾರದ ನುಡಿಗಳು ಎದ್ದಿದ್ದವು. ಅದರ ಮಧ್ಯೆಯೂ ಪೊಲಿಯೋ ಲಸಿಕೆ ವಿತರಣೆಯಾಗಿ, ಇಂದು ಭಾರತ ಪೊಲಿಯೋ ಮುಕ್ತ ದೇಶವಾಗಿದೆ. ಈಗಲೂ ಹಾಗೇ ಕೊರೋನಾ ಲಸಿಕೆಯ ಬಗ್ಗೆ ಹಲವು ಗಾಳಿಸುದ್ದಿಗಳು ಎದ್ದೇಳುತ್ತಿವೆ. ಆದ್ರೇ ದೇಶದ ಜನರು ಅದಕ್ಕೆಲ್ಲಾ ಕಿವಿಗೊಡಬಾರದು ಎಂಬುದಾಗಿ ಮನವಿ ಮಾಡಿದ್ದಾರೆ.

TRENDING