Tuesday, January 26, 2021
Home ಕೋವಿಡ್-19 ಫೆಬ್ರವರಿ, ಮಾರ್ಚ್ ತಿಂಗಳಿನಲ್ಲಿ ಕೊರೋನಾ 2ನೇ ಅಲೆ ಹರಡುವ ಸಾಧ್ಯತೆ..! : ಡಾ.ಮಂಜುನಾಥ್

ಇದೀಗ ಬಂದ ಸುದ್ದಿ

ಫೆಬ್ರವರಿ, ಮಾರ್ಚ್ ತಿಂಗಳಿನಲ್ಲಿ ಕೊರೋನಾ 2ನೇ ಅಲೆ ಹರಡುವ ಸಾಧ್ಯತೆ..! : ಡಾ.ಮಂಜುನಾಥ್

 ಬೆಂಗಳೂರು,ಜ.3-ಫೆಬ್ರವರಿ, ಮಾರ್ಚ್ ತಿಂಗಳಿನಲ್ಲಿ ಕೋವಿಡ್ 2ನೇ ಅಲೆ ಹರಡುವ ಸಾಧ್ಯತೆಯಿದ್ದು, ಜನರು ಹೆಚ್ಚು ಜಾಗೃತೆ ಹಾಗೂ ಮುನ್ನೆಚ್ಚರಿಕೆಯಿಂದ ಇರಬೇಕು ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಮಂಜುನಾಥ್ ತಿಳಿಸಿದರು.

ಕೇಂದ್ರ ಸರ್ಕಾರ ಕೋವಿಡ್ ಲಸಿಕೆ ನೀಡಲು ಅನುಮತಿ ಕೊಟ್ಟಿರುವುದು ಸ್ವಾಗತಾರ್ಹ. ಆದರೆ ಆರಂಭದಲ್ಲಿ ಆದ್ಯತೆ ಮೇಲೆ ಲಸಿಕೆ ನೀಡುವುದರಿಂದ ಎಲ್ಲರಿಗೂ ಲಸಿಕೆ ಸಿಗುವುದಿಲ್ಲ. ಹೀಗಾಗಿ 3ರಿಂದ 6 ತಿಂಗಳ ಕಾಲ ಕೋವಿಡ್ ಬಗ್ಗೆ ಜನರು ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಈಗಾಗಲೇ ಮಧ್ಯ ಏಷ್ಯಾ ಬ್ರಿಟನ್ ಮೊದಲಾದ ದೇಶಗಳಲ್ಲಿ ಕೊರೊನಾ 2ನೇ ಅಲೆ ಕಂಡುಬಂದಿದೆ. ಕೋವಿಡ್ ಮೊದಲ ಅಲೆಯಷ್ಟು ತೀವ್ರತೆ ಇಲ್ಲದಿದ್ದರೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ ಎಂದರು.

TRENDING