Monday, January 25, 2021
Home ಅಂತರ್ ರಾಷ್ಟ್ರೀಯ ರೂಪಾಂತರಿ ಕೊರೊನಾ ವೈರಸ್ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಮತ್ತೊಂದು ಶಾಕಿಂಗ್ ನ್ಯೂಸ್!

ಇದೀಗ ಬಂದ ಸುದ್ದಿ

ರೂಪಾಂತರಿ ಕೊರೊನಾ ವೈರಸ್ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಮತ್ತೊಂದು ಶಾಕಿಂಗ್ ನ್ಯೂಸ್!

ನವದೆಹಲಿ: ರೂಪಾಂತರಿ ಕೊರೊನಾ ವೈರಸ್ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆ ಮತ್ತೊಂದು ಶಾಕಿಂಗ್ ನ್ಯೂಸ್ ವೊಂದನ್ನು ನೀಡಿದ್ದು, ವಿಶ್ವದಲ್ಲಿ ಪ್ರಸ್ತುತ ಕನಿಷ್ಠ ನಾಲ್ಕು ಮಾದರಿಯಲ್ಲಿ ರೂಪಾಂತರಗೊಂಡ ಕೊರೊನಾ ಸೋಂಕು ಹರಡಿದೆ ಎಂದು ಘೋಷಿಸಿದೆ.

ಚೀನಾದಲ್ಲಿ ಮೊದಲ ಬಾರಿ ಕೊರೊನಾ ವೈರಸ್ ಕಾಣಿಸಿಕೊಂಡ ನಂತರ ವಿಶ್ವದ ನಾನಾ ಕಡೆ ಕನಿಷಱಠ ನಾಲ್ಕು ರೂಪಾಂತರಗೊಂಡಿರುವ ಕೊರೊನಾ ವೈರಸ್ ಕಾಣಿಸಿಕೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ವಿಶ್ವದಾದ್ಯಂತ ದಿನದಿಂದ ದಿನಕ್ಕೆ ರೂಪಾಂತರಿ ಕೊರೊನಾ ವೈರಸ್ ಅಬ್ಬರ ಹೆಚ್ಚಳವಾಗುತ್ತಿದ್ದು, ರೂಪಾಂತರಿ ಕೊರೊನಾ ವೈರಸ್ ಅಪಾಯಕಾರಿ ಆಗುವ ಸೂಚನೆ ಇದ್ದು, ಇವುಗಳ ನಿಯಂತ್ರಣ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

TRENDING